Tuesday, November 28, 2023

ಪ್ರಾಯೋಗಿಕ ಆವೃತ್ತಿ

ಯುಎಇ : ವಿಜೃಂಭಣೆಯಿಂದ ಉದ್ಘಾಟನೆಗೊಂಡ ಒಕ್ಕಲಿಗರ ಬಳಗ

✍️ ಪಿ.ರಾಜುಗೌಡ. ದುಬೈ.  (ಒಕ್ಕಲಿಗರ ಬಳಗದ ಪರವಾಗಿ)


  • ದುಬೈ ನಗರದಲ್ಲಿ ‘ಒಕ್ಕಲಿಗರ ಬಳಗ’ ವಿಜೃಂಭಣೆಯಿಂದ ಉದ್ಘಾಟನೆ
  • ಗೌಡರ ಬಾಡೂಟ ತಯಾರು ಮಾಡುವ ಕಾರ್ಯಕ್ರಮ
  • ಹೊಲವನ್ನು ಉಳುತ್ತಿರುವ ರೈತವಿರುವ ಸುಂದರ ಲೋಗೋ  ಅನಾವರಣ

ಕರ್ನಾಟಕದ ಪ್ರಬಲ ಒಕ್ಕಲಿಗ  ಸಮುದಾಯ ವಿಶ್ವದೆಲ್ಲೆಡೆ ಹರಡಿದೆ ಮತ್ತು ತಮ್ಮ ಕೊಡುಗೆಯನ್ನು ಕೊಡುತ್ತಿದೆ. ಇದೇ ನಿಟ್ಟಿನಲ್ಲಿ ತಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದಲ್ಲಿ ಒಕ್ಕಲಿಗ ಜನಾಂಗವನ್ನು ಒಗ್ಗೂಡಿಸಿ ಪಸರಿಸಲು 12,02.2023 ರಂದು, ಮಮ್ಜಾರ್ ಉದ್ಯಾನವನ, ದುಬೈ ನಗರದಲ್ಲಿ ಒಕ್ಕಲಿಗರ ಬಳಗ, ಯುಎಇ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು. ಸುಮಾರು ಇನ್ನೂರಕ್ಕೂ ಹೆಚ್ಚು ಒಕ್ಕಲಿಗರು ತಮ್ಮ ಕುಟುಂಬದೊಂದಿಗೆ ಗೌಡ ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರು ಸೀರೆ ಮತ್ತು ಪುರುಷರು ಪಂಚೆ ಧರಿಸಿ ಕಾರ್ಯಕ್ರಮಕ್ಕೆ ಸಂತೋಷದಿಂದ ಆಗಮಿಸಿದ್ದರು.

ಸ್ಥಳದಲ್ಲೇ ಗೌಡರ ಬಾಡೂಟ ತಯಾರು ಮಾಡುವ ಕಾರ್ಯಕ್ರಮ ಆರಂಭವಾಯಿತು. ಎಲ್ಲರೂ ಸೇರಿ ತರಕಾರಿ ಮತ್ತು ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸಿ ರಾಗಿ ಮುದ್ದೆ, ಮಟನ್ ಚಾಪ್ಸ್, ಚಿಕನ್ ಸಾಂಬಾರ, ಬಿರಿಯಾನಿ, ಅನ್ನ, ತಿಳಿಸಾರು ಮತ್ತು ಸಿಹಿಯನ್ನು ತಯಾರು ಮಾಡಿ ಸಾಮೂಹಿಕ ಭೋಜನ ಮಾಡಿದರು. ನಂತರ ಮಕ್ಕಳಿಗೆ ಮತ್ತು ಹಿರಿಯರಿಗೆ ಆಟೋಟ ಸ್ಪರ್ಧೆಗಳು – ಲೆಮನ್ ಅಂಡ್ ಸ್ಪೂನ್, ಟಗ್ ಒಫ್ ವಾರ್, ಪಾಸಿಂಗ್ ದಿ ಬಾಲ್, ಸಾಂಸ್ಕೃತಿಕ ನೃತ್ಯ, ಹಾಡುಗಾರಿಕೆ ಎಲ್ಲರನ್ನು ಮನರಂಜಿಸಿದವು.

ಒಕ್ಕಲಿಗರ ಬಳಗದ ಪ್ರಥಮ ಅಧ್ಯಕ್ಷರಾಗಿ ಡಾ. ರಶ್ಮಿ ನಂದಕಿಶೋರ್, ಮುಖ್ಯ ಸಂಚಾಲಕರಾಗಿ ಶ್ರೀ ವರದರಾಜ ಕೋಲಾರ , ಶ್ರೀ. ಕಿರಣ್ ಗೌಡ ಹಾಸನ ಶ್ರೀ ಪ್ರಸೀದ್ ಕೊಡಗು, ಶ್ರೀ ಹರೀಶ್ ಕೋಡಿ ಕುಶಾಲನಗರ, ಮುಖ್ಯ ಕಾರ್ಯ ನಿರ್ವಾಹಕರಾಗಿ ಶ್ರೀ ಪುಟ್ಟರಾಜು ಮಂಡ್ಯ, ಶ್ರೀ.ಸುರೇಶ್ ಕೋಲಾರ ಶ್ರೀ.ಪ್ರದೀಪ್ ಆಯ್ಕೆಗೊಂಡರು. ತಮ್ಮ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಆಶ್ವಾಸನೆ ನೀಡಿದರು.

ಶ್ರೀಮತಿ ದಿವ್ಯ, ಶ್ರೀಮತಿ.ನೀತು, ಶ್ರೀಮತಿ ಮೀನ, ಶ್ರೀಮತಿ, ಮಮತ, ಶ್ರೀಮತಿ ಅನಿತ, ಶ್ರೀಮತಿ, ದೀಕ್ಷಾ, ಶ್ರೀಮತಿ.ಬಿಂದು,ಶ್ರೀ.ಶರತ್, ಶ್ರೀ.ಆಕಾಶ್, ಶ್ರೀ.ವೆಂಕಟಾಚಲಪತಿ ಶ್ರೀ ಬಸವರಾಜ್, ಶ್ರೀ ಕಿರಣ್, ಶ್ರೀ ಯತೀಶ್, ಶ್ರೀ ಅಕ್ಷಯ್ ಶ್ರೀ ನಿತಿನ್ ಕನೇರ ಕಾರ್ಯಕ್ರಮಕ್ಕೆ ನೆರವು ನೀಡಿದರು.

ಪೂಜ್ಯ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ, ನಾಡಪ್ರಭು ಶ್ರೀ ಕೆಂಪೇಗೌಡರು, ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿ ಕರ್ನಾಟಕ ಬಣ್ಣದ ವೃತ್ತದಲ್ಲಿ  ಶ್ರೀ ಕೆಂಪೇಗೌಡರಿರುವ ದುಡಿಮೆಯೇ ದೇವರು ಎನ್ನುವ ಶೀರ್ಷಿಕೆ ಅಡಿಯಲ್ಲಿ ಹೊಲವನ್ನು ಉಳುತ್ತಿರುವ ರೈತನಿರುವ ಸುಂದರ ಲೋಗೋವನ್ನು ಅನಾವರಣ ಗೊಳಿಸಲಾಯಿತು.

ಇಂತಹ ಉತ್ತಮ ಧ್ಯೇಯ ಹೊಂದಿದ ಕಾರ್ಯಕ್ರಮವನ್ನು, ಸ್ಥಾಪಕರನ್ನು ಎಲ್ಲಾ ನೂತನ ಸದಸ್ಯರು ಶ್ಲಾಘಿಸಿದರು. ತಮ್ಮ ಸಮುದಾಯದವರನ್ನು ಪರಸ್ಪರ ಪರಿಚಯಿಸಿಕೊಂಡು ಹೊರನಾಡಿನಲ್ಲಿ ಒಂದಾದ ಹರ್ಷ ಮತ್ತು ಮುಂಬರುವ ಕಾರ್ಯಕ್ರಮಗಳ ಉತ್ತಮ ನಿರೀಕ್ಷೆ, ಕೊಡುಗೆ ಕೊಡುವ ಹಂಬಲ ಮತ್ತು ಅಭಿವೃದ್ಧಿಯ ಪಣತೊಟ್ಟು ಕಾರ್ಯಕ್ರಮ ಯಶಸ್ವಿಯಾಗಿ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!