Monday, May 6, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಜಾ.ದಳದಿಂದ ಬಿಜೆಪಿ ಮುಖಂಡರ ಕಡೆಗಣನೆ: ಅಸಮಾಧಾನ ಸ್ಪೋಟ

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಸ್ಥಳೀಯ ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಕಡೆಗಣಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಲ್ ಎಸ್ ಚೇತನ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಬಿಂಡಿಗನವಿಲೇ ಹೋಬಳಿ ವ್ಯಾಪ್ತಿಯಲ್ಲಿ NDA ಪಕ್ಷದ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪರವಾಗಿ ಹೊನ್ನಾವರ. ಕಂಬದಹಳ್ಳಿ, ಬೀದರಕೆರೆ ಸೇರಿದಂತೆ ನಾನಾ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಕಂಬದಹಳ್ಳಿಯಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಜೆಡಿಎಸ್ ಒಮ್ಮತದಿಂದ ಮೈತ್ರಿ ಮಾಡಿಕೊಂಡಿದೆ. ಅದರಂತೆ ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ, ಅದು ನಮಗೆಲ್ಲ ಬಹಳ ಖುಷಿಯ ವಿಚಾರವಾಗಿದೆ, ಆದರೇ ಸ್ಥಳೀಯ ಮಟ್ಟದಲ್ಲಿ ಮೈತ್ರಿ ಒಕ್ಕೂಟದಲ್ಲಿ ಹೊಂದಾಣಿಕೆ ಇಲ್ಲ, ಸ್ಥಳೀಯವಾಗಿ ಜೆಡಿಎಸ್ ನ ಮಾಜಿ ಶಾಸಕ ಸುರೇಶ್ ಗೌಡರು, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನ ಕಡೆಗಣಿಸುತ್ತಿದ್ದಾರೆಂದು ಕಿಡಿಕಾರಿದರು.

ಏ.15ರಂದು ಕುಮಾರಸ್ವಾಮಿಯವರ ಪರವಾಗಿ ಅವರ ಮಗ ನಿಖಿಲ್ ಕುಮಾರಸ್ವಾಮಿ ನಮ್ಮ ಕ್ಷೇತ್ರವಾದ ಬಿಂಡಿಗನವಿಲೇ ಹೋಬಳಿಯಲ್ಲಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಆ ವಿಚಾರದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ ಹಾಗೂ ಸ್ಥಳೀಯ ಜೆಡಿಎಸ್ ನಾಯಕರಿಗೂ ತಿಳಿಸಿಲ್ಲ. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನ ಕಡೆಗಣಿಸುತ್ತಿದ್ದಾರೆ, ಜೆಡಿಎಸ್ ನಾಯಕರಿಗೆ ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಭಯ ಇರಬೇಕು ಎಂದು ತಿರುಗೇಟು ನೀಡಿದರು.

ಅಭ್ಯರ್ಥಿಯಾದವರು ಯಾವ ಯಾವ ಕ್ಷೇತ್ರದಲ್ಲಿ ಯಾವ ರೀತಿಯ ಚುನಾವಣಾ ಪ್ರಚಾರ ವ್ಯವಸ್ಥೆ ಹೇಗಿದೆ ಎಂದು ಗಮನಿಸಬೇಕು ಅವರು ಉದಾಸೀನತೆ ಮಾಡುತ್ತಿದ್ದಾರೆ ಅದು ಯಾಕೆ ಎಂದು ತಿಳಿಯುತ್ತಿಲ್ಲ. ಇವೆಲ್ಲವನ್ನು ಅಭ್ಯರ್ಥಿ ಮನಗಂಡು ಇಬ್ಬರನ್ನು ಸಮನ್ವಯತೆಯಿಂದ ಕರೆದುಕೊಂಡು ಹೋದರೆ ಉತ್ತಮ ಫಲಿತಾಂಶವನ್ನ ಪಡೆಯಬಹುದು ಬಹಳ ಅಂತರಗಳಿಂದ ಗೆಲುವನ್ನ ಸಾಧಿಸಬಹುದು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!