Friday, June 21, 2024

ಪ್ರಾಯೋಗಿಕ ಆವೃತ್ತಿ

ನಾಲೆ ಆಧುನೀಕರಣ ಮಾಡುತ್ತಿದ್ದರೂ ನಾಲೆಗಳಿಗೆ ನೀರು ಹರಿಸಿದ್ದೆ: ಹೆಚ್.ಡಿ.ಕುಮಾರಸ್ವಾಮಿ

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾಲೆ ಆಧುನೀಕರಣ ಮಾಡುತ್ತಿದ್ದರೂ ಕೂಡ ರೈತರಿಗೆ ಅನಾನುಕೂಲವಾಗದಂತೆ ವ್ಯವಸಾಯಕ್ಕೂ ನೀರುಹರಿಸಿ ಜೊತೆಗೆ ಕಾಮಗಾರಿಯೂ ನಡೆಯುವಂತೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ವತಿಯಿಂದ ನಡೆದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾಲೆ ಆಧುನೀಕರಣ ಮಾಡುತ್ತಿದ್ದರೂ ಕೂಡ ರೈತರಿಗೆ ಅನಾನುಕೂಲವಾಗದಂತೆ ವ್ಯವಸಾಯಕ್ಕೂ ನೀರುಹರಿಸಿ ಜೊತೆಗೆ ಕಾಮಗಾರಿಯೂ ನಡೆಯುವಂತೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇಂದು ಕಾಂಗ್ರೆಸ್ ಸರ್ಕಾರ ಕೆಆರ್‌ಎಸ್‌ನಲ್ಲಿ 98 ಅಡಿ ನೀರು ಇದ್ದಾಗಲೇ ಕಬ್ಬು, ಭತ್ತ ನಾಟಿ ಮಾಡಬೇಡಿ ಅಂತಾ ಪ್ರಕಟಣೆ ಹೊರಡಿಸಿದರು. ನಾಲೆ ಅಭಿವೃದ್ದಿಯ ಕಾರಣ ಹೇಳಿ ರೈತರಿಗೆ ನೀರು ಬಿಡುತ್ತಿಲ್ಲ, ಇದರಿಂದ ಸಾವಿರಾರು ಎಕರೆ ನೀರಿಲ್ಲದೇ ಒಣಗಿವೆ, ಜನಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಆಹಾಕಾರ ಉಂಟಾಗಿದೆ ಎಂದರು.

ಇಲ್ಲಿನ ಶಾಸಕರು ಕುಮಾರಸ್ವಾಮಿಯವರಿಂದ ಮಂಡ್ಯ ಜಿಲ್ಲೆಗೆ ಕೊಡುಗೆ ಏನು ಕೇಳುತ್ತಿದ್ದಾರೆ, ಮೈಷುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅನುದಾನ ಕೊಟ್ಟಿರುವುದರ ಜೊತೆಗೆ ಪ್ರಾಮಾಣಿಕವಾಗಿ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಿದ್ದೇನೆ, ಕಾಂಗ್ರೆಸ್‌ನವರು ಹೊಸ ಕಾರ್ಖಾನೆ ಮಾಡುತ್ತೇವೆಂದು ಬಜೆಟ್‌ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ, ಆದರೇ ಒಂದು ರೂಪಾಯಿಯನ್ನು ಮೀಸಲಿಟ್ಟಿಲ್ಲ, ಮೈಷುಗರ್ ಕಾರ್ಖಾನೆಯ ಸಾಮಾಗ್ರಿಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಹೊಸ ಕಾರ್ಖಾನೆ ಕಟ್ಟಲು ಮುಂದಾಗುತ್ತಿದ್ದಾರೆಂದು ಹೇಳಿದರು

ಮಂಡ್ಯ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಥಮಭಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಹೋಗಿ ಸಾಂತ್ವನ ಹೇಳಿದರು. ನಂತರದಲ್ಲಿ ಆತ್ಮಹತ್ಯೆಗೆ ಶರಣಾದ ಎಲ್ಲಾ ರೈತರ ಮನೆಗಳಿಗೆ ಹೋಗಿ ತನ್ನ ಕೈಲಾದ ಅರ್ಥಿಕ ಸಹಾಯವನ್ನು ಮಾಡಿ ಆತ್ಮಸೈರ್ಯ ತುಂಬಿದೆ, ಎಚ್.ಡಿ.ದೇವೇಗೌಡ ಅವರನ್ನು ನಾವು ಪಿಎಂ ಮಾಡಿದ್ದವು ಎನ್ನುವ ಕಾಂಗ್ರೆಸ್ ನವರೇ ಅವರನ್ನು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು, ನನ್ನ ಸಿಎಂ ಮಾಡಿದ್ದು, ನಾವೇ ಎನ್ನುವವವರ ಮನೆ ಬಾಗಿಲಿಗೆ ನಾನು ಹೋಗಿರಲಿಲ್ಲ, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ದೇವೇಗೌಡರು ಹೇಳಿದ್ದಾಗ ಒಪ್ಪದ ಕಾಂಗ್ರೆಸ್‌ನವರು ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿಲ್ಲ ಎಂದರು.

ಮಳವಳ್ಳಿ ಪಟ್ಟಣದ ಸಾರಿಗೆ ಬಸ್‌ನಿಲ್ದಾಣದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಸೇಬಿನ ಹಾರಹಾಕಿ ಅಭಿನಂದನೆ ಸಲ್ಲಿಸಿದರು. ನಂತರ ತೆರದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವೇದಿಕೆ ಬಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!