Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ದಿನಚರಿ 2024 ರ ಹೊಸ್ತಿಲಲ್ಲಿ…..

✍️ ವಿವೇಕಾನಂದ ಎಚ್.ಕೆ

ದೇಹ – ಮನಸ್ಸಿನ ಡಯಟ್…..

ಬೆಳಗ್ಗೆ ಸುಮಾರು 5 ಗಂಟೆಗೆ ಹಾಸಿಗೆಯಿಂದ ಏಳುವುದು…….

ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು ಕೋಣೆಯೊಳಗೆ ಒಂದು ನಡಿಗೆ‌‌‌‌‌……

ಸುಮಾರು 5/30 ಕ್ಕೆ ಯೋಗ ಪ್ರಾಣಾಯಾಮ ಧ್ಯಾನ ಮಾಡುವುದು….

6/30/ ರಿಂದ 7 ಸ್ನಾನ ಮಾಡಿ ಸಿದ್ದರಾಗುವುದು…..

7 ರಿಂದ 7/30 ರವರೆಗೆ ಪತ್ರಿಕೆ ಓದುತ್ತಾ ಕಾಫಿ ಅಥವಾ ಟೀ ಅಥವಾ ಹಾಲು ಅಥವಾ ಗ್ರೀನ್ ಟೀ ಅಥವಾ ರಾಗಿ ಗಂಜಿ ಅಥವಾ ಸಿರಿ ಧಾನ್ಯಗಳ ಮಾಲ್ಟ್‌‌ ಅಥವಾ ಕಷಾಯ ಅಥವಾ ನಿಂಬೆಹಣ್ಣು ಜೇನುತುಪ್ಪ ಅಥವಾ ಮತ್ತೇನಾದರೂ ಸ್ಥಳೀಯ ಪಾನೀಯ ಸೇವಿಸುವುದು….

7/30 ರಿಂದ ಸುಮಾರು 9 ಗಂಟೆಯವರೆಗೆ ಅವರವರ ಕುಟುಂಬದ ಪರಿಸ್ಥಿತಿಗೆ ತಕ್ಕಂತೆ ಮನೆಯ ನಿರ್ವಹಣೆ ಮಾಡುವುದು……

9 ರಿಂದ 9/30 ಬೆಳಗಿನ ಉಪಹಾರ…..

9/30 ಅವರವರ ಜೀವನೋಪಾಯಕ್ಕಾಗಿ ಉದ್ಯೋಗ ವೃತ್ತಿ ವ್ಯಾಪಾರ ಸೇವೆ ಹೋರಾಟ ಕೃಷಿ ಮುಂತಾದ ಕೆಲಸಗಳಲ್ಲಿ ತೊಡಗುವುದು……

ನಂತರ 9/30 ಗಂಟೆಗೆ…

ಬೆಳಗಿನ ಉಪಹಾರ

1) ಮೊದಲನೆಯ ಆಯ್ಕೆ,

ಹಸಿ ಮೊಳಕೆ ಕಾಳುಗಳು, ಬೇಯಿಸಿದ ಅಥವಾ ಹಸಿ ತರಕಾರಿಗಳು, ಹಣ್ಣುಗಳು, ಒಣ ಹಣ್ಣುಗಳು ( ಬಾದಾಮಿ ದ್ರಾಕ್ಷಿ ಗೋಡಂಬಿ ಪಿಸ್ತಾ ಅಂಜೂರ ವಾಲ್ ನಟ್ )
ಅಭ್ಯಾಸ ಇದ್ದವರಿಗೆ ಮೊಟ್ಟೆ, ಕಾರ್ನ್ ಪ್ಲೆಕ್ಸ್, ಓಟ್ಸ್, ಬ್ರೆಡ್ ಹಾಲು ಇತ್ಯಾದಿ…..

2) ಎರಡನೆಯ ಆಯ್ಕೆ,

ಇಡ್ಲಿ ವಡೆ ದೋಸೆ ಚಿತ್ರಾನ್ನ ಪಲಾವ್ ಅವಲಕ್ಕಿ ಉಪ್ಪಿಟ್ಟು ಸಿರಿ ಧಾನ್ಯಗಳ ಪದಾರ್ಥಗಳು ಮತ್ತು ಆಯಾ ಪ್ರದೇಶದ ಸ್ಥಳೀಯ ತಿಂಡಿಗಳು ಇತ್ಯಾದಿ….

3) ಮೂರನೆಯ ಆಯ್ಕೆ.

ಇಂದಿರಾ ಕ್ಯಾಂಟೀನಿನ 5 ರೂಪಾಯಿ ತಿಂಡಿ ಅಥವಾ ರಸ್ತೆ ಬದಿಯ ಅತ್ಯಂತ ಕಡಿಮೆ ಬೆಲೆಯ ಉಪಹಾರ ಅಥವಾ ಸ್ಥಳೀಯವಾದ ಗಂಜಿ ಇತ್ಯಾದಿ…..

10 ಗಂಟೆಯಿಂದ ಸುಮಾರು ಮಧ್ಯಾಹ್ನ 2 ಗಂಟೆಯವರೆಗೆ ಅವರವರ ಕಾಯಕ……

ಮನೆಯೋ, ಕಚೇರಿಯೋ, ಹೊರಗಡೆಯೋ ಅವರವರ ಪರಿಸ್ಥಿತಿ ಅವಲಂಬಿಸಿ…..

ಮಧ್ಯಾಹ್ನ 2 ಗಂಟೆಗೆ ಊಟ….

ಮಧ್ಯಾಹ್ನದ ಊಟ

1) ಮೊದಲನೆಯ ಆಯ್ಕೆ.

ಬಗೆ ಬಗೆಯ ಸೂಪುಗಳು,
ಮುದ್ದೆ ಚಪಾತಿ ರೋಟಿ ರೊಟ್ಟಿ ಅನ್ನ ಸಾಂಬಾರ್ ದಾಲ್, ಸಿಹಿ, ತರಕಾರಿಗಳು ಹಣ್ಣುಗಳು ಅಭ್ಯಾಸ ಇರುವವರಿಗೆ ಮೊಟ್ಟೆ ಕೋಳಿ ಮೀನು ಮಾಂಸ ಸೀಗಡಿ ಇತ್ಯಾದಿ…….

2) ಎರಡನೆಯ ಆಯ್ಕೆ.

ಮುದ್ದೆ ಸಾಂಬಾರ್,
ಅಥವಾ
ರೋಟಿ ದಾಲ್,
ಅಥವಾ
ರೊಟ್ಟಿ ಪಲ್ಯ,
ಅಥವಾ
ಚಪಾತಿ ಪಲ್ಯ,
ಅಥವಾ,
ಅನ್ನ ಸಾಂಬಾರ್,
ಅಥವಾ ಮೊಸರನ್ನ,
ಅಥವಾ ಗಂಜಿ,
ಅಥವಾ ಸ್ಥಳೀಯ ಆಹಾರ ಇತ್ಯಾದಿ…….

3) ಮೂರನೆಯ ಆಯ್ಕೆ,

ಇಂದಿರಾ ಕ್ಯಾಂಟೀನ್ ಅಥವಾ ಧರ್ಮ ಛತ್ರ ಅಥವಾ ಪಾದಚಾರಿ ರಸ್ತೆಯ ತಳ್ಳುಗಾಡಿಯ ಆಹಾರ ಅಥವಾ ಅತ್ಯಂತ ಕಡಿಮೆ ಬೆಲೆಯ ಯಾವುದೋ ಒಂದು ಆಹಾರ ಇತ್ಯಾದಿ…….

3 ಗಂಟೆಯಿಂದ ಸಂಜೆ 5/30 ರವರೆಗೆ ಮತ್ತೆ ಅವರವರ ಕಾಯಕ……..

ಸಂಜೆ 5/30 ಯಾವುದಾದರು ಲಘು ಪಾನೀಯ ಮತ್ತು ಉಪಹಾರ………

ಸಂಜೆ 5/30 ರಿಂದ 6/30 ಯಾವುದಾದರು ಸ್ಥಳದಲ್ಲಿ ನಡಿಗೆ………..

6/30 ರಿಂದ 8 ಗಂಟೆಯವರೆಗೆ
ಮನೆಯಲ್ಲಿ ಕುಟುಂಬದವರೊಂದಿಗೆ ಮಾತುಕತೆ ಅಥವಾ ಓದು ಬರಹ ಅಥವಾ ಟಿವಿ ವೀಕ್ಷಣೆ ಅಥವಾ ಅವರವರ ಆಸಕ್ತಿಯ ಕೆಲಸ………

ರಾತ್ರಿ 8 ಗಂಟೆಗೆ ಅಗತ್ಯ ಮತ್ತು ಅಭ್ಯಾಸ ಇರುವವರಿಗೆ ಊಟ……

ರಾತ್ರಿ ಊಟ

1) ಮೊದಲನೆಯ ಆಯ್ಕೆ…..

ಬಗೆಬಗೆಯ ಸೂಪುಗಳು,
ಒಣ ಹಣ್ಣುಗಳ ಕಿಚಡಿ, ತರಕಾರಿಗಳು, ಹಣ್ಣುಗಳು, ಕೇಕುಗಳು, ಅಭ್ಯಾಸ ಇದ್ದವರಿಗೆ ಮಾಂಸಾಹಾರದ ತುಣುಕುಗಳು ಇತ್ಯಾದಿ……

2) ಎರಡನೆಯ ಆಯ್ಕೆ,

ಬಹುತೇಕ ಮಧ್ಯಾಹ್ನ ಉಳಿದ ಪದಾರ್ಥಗಳು ಅಥವಾ ಅದೇ ರೀತಿಯ ಆಹಾರ ಇತ್ಯಾದಿ ಅಥವಾ ಉಪವಾಸ…..

3) ಮೂರನೆಯ ಆಯ್ಕೆ,

ಇಂದಿರಾ ಕ್ಯಾಂಟೀನ್ ಅಥವಾ ದೇವಸ್ಥಾನ ಅಥವಾ ಧರ್ಮ ಛತ್ರ ಅಥವಾ ಅತ್ಯಂತ ಕಡಿಮೆ ಬೆಲೆಯ ಆಹಾರ ಇತ್ಯಾದಿ ಅಥವಾ ಉಪವಾಸ……

ಸಾಮಾನ್ಯವಾಗಿ 1 ನೇ ನಂಬರಿನ ಆಹಾರ ಶ್ರೀಮಂತರದು, 2 ನೇ ನಂಬರಿನ ಆಹಾರ
ಮಧ್ಯಮ ವರ್ಗಗಳದು ಮತ್ತು 3 ನೇ ನಂಬರಿನ ಆಹಾರ ಕಡು ಬಡವರದು………

ಶ್ರೀಮಂತರಿಗೆ ಆಯ್ಕೆಗಳಿರುತ್ತದೆ.
ಮಧ್ಯಮ ವರ್ಗದವರಿಗೆ ಅನಿವಾರ್ಯ ಮತ್ತು ಬಡವರಿಗೆ ಆಯ್ಕೆಗಳೇ ಇರುವುದಿಲ್ಲ…..

ವಾಸ್ತವದಲ್ಲಿ ಶ್ರೀಮಂತರ ಮೊದಲನೇ ನಂಬರಿನ ಆಹಾರವೇ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿನಿತ್ಯ ಸೇವಿಸಬೇಕಾದ ಅತ್ಯಂತ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರ. ( ವೈದ್ಯಕೀಯ ಕಾರಣ ಹೊರತುಪಡಿಸಿ )…..

ಎರಡನೆಯ ನಂಬರಿನ ಆಹಾರ ಹಣದ ಕೊರತೆಯಿಂದ ಅನಿವಾರ್ಯವಾಗಿ ಸೇವಿಸಬೇಕಾದ ಆಹಾರ. ಅಷ್ಟೊಂದು ಉತ್ತಮ ಅಲ್ಲ. ಆದರೆ ಬೇರೆ ದಾರಿ ಇಲ್ಲ….

ಮೂರನೇ ನಂಬರಿನ ಆಹಾರ ಬದುಕಲು ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ಸಿಕ್ಕುವ ಯಾವುದೇ ಆಹಾರವನ್ನು ಅದರ ಗುಣಮಟ್ಟ ಪ್ರಶ್ನಿಸದೆ ತಿನ್ನುವ ಕಡು ಬಡತನದ ಪರಿಸ್ಥಿತಿ. ಅವರಿಗೆ ಆಯ್ಕೆಗಳಿಲ್ಲ…..

ಬಡತನ ಒಂದು ಶಾಪ. ಅದು ಅನಿವಾರ್ಯವಾದಾಗ ಅದನ್ನು ಒಪ್ಪಿ ಜೀವಿಸಬೇಕೆ ಹೊರತು ಅದೇ ನಮ್ಮ ಆಯ್ಕೆ ಆಗಬಾರದು…..

ನಮ್ಮ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಆಯ್ಕೆಯ ಆಹಾರ ತಮ್ಮ ಜೀವಿತದ ಸಂಪೂರ್ಣ ಕಾಲವೂ ನಿರಂತರ ಸಿಗುವಂತೆ ಮಾಡಬೇಕು ಎಂಬುದು ನಮ್ಮ ಕನಸು…..

ಬಡತನದ ಕಾರಣದಿಂದ ಊಟಕ್ಕೆ ಅಲೆದಾಡಿದ ದಿನಗಳು ಮತ್ತು ಸಮಾರಂಭಗಳಲ್ಲಿ ಆಸೆ ಕಣ್ಣುಗಳಿಂದ ನೋಡುತ್ತಿದ್ದ ಭಕ್ಷ್ಯ ಭೋಜನಗಳ ನಡುವಿನ ಅಂತರ ಸದಾ ನನ್ನನ್ನು ಕಾಡುತ್ತಿದೆ…..

ಇರಲಿ ಅದು ಬೇರೆ ವಿಷಯ.

ರಾತ್ರಿ 8/30 ರಿಂದ ಮತ್ತೆ ಮನೆಯ ಪರಿಸ್ಥಿತಿ ಅಥವಾ ಆಸಕ್ತಿಯ ಕೆಲಸಗಳನ್ನು ಮಾಡುವುದು……

ರಾತ್ರಿ 10 ಗಂಟೆಗೆ ಒಂದು ಸಣ್ಣ ಮೌನದ ಸರಳ ಧ್ಯಾನ ಮತ್ತು ನಿದ್ರೆಗೆ ಜಾರುವುದು……

ಇದರ ಜೊತೆಗೆ ಸಮಯ ಸಿಕ್ಕಾಗ ಅಥವಾ ರಜಾ ದಿನಗಳಲ್ಲಿ ಓದು ಬರಹ ಪ್ರವಾಸ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿಕೆ, ಸಮಾರಂಭಗಳಲ್ಲಿ ಭಾಗವಹಿಸುವಿಕೆ, ಆಸಕ್ತಿಯ ಕೆಲಸಗಳ ನಿರ್ವಹಣೆ ಹೀಗೆ ಒಂದಷ್ಟು ಮನಸ್ಸಿನ ಡಯಟ್ ಸಹ ಮಾಡಬೇಕು…….

ಇದು‌ ಸಾಮಾನ್ಯ ದಿನಚರಿ ಆಗಿರಲಿ. ಹಾಗೆಯೇ ಅನೇಕ ಬಾರಿ ವಿಶೇಷ ದಿನಚರಿಯೂ ಇರುತ್ತದೆ……

ಒಟ್ಟಿನಲ್ಲಿ 2024 ರಲ್ಲಿ ಒಂದಷ್ಟು ಹೊಸ ಸಂಕಲ್ಪದೊಂದಿಗೆ ಮುನ್ನಡೆಯಿರಿ. ಬದುಕು ಸುಖಪ್ರದವಾಗಲಿ…..

ಎಲ್ಲರಿಗೂ ಹೊಸ ವರುಷದ ಶುಭಾಶಯಗಳು……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!