ಸತ್ಯವನ್ನು
ಕಷ್ಟಪಟ್ಟು ಸೂಜಿದಾರದಿಂದ
ಹೊಲಿದು ನೇತು ಹಾಕುವಷ್ಟರಲ್ಲಿ
ಸುಳ್ಳು ಎಂಬ ರೆಡಿಮೇಡ್
ವಕ್ಕರಿಸುತ್ತೆ
ಸತ್ಯ
ಎಂಬ ನೂಲನ್ನು
ಚರಕದಿಂದ ಖಾದಿಯಾಗಿ
ಮಾಡುವಷ್ಟರಲ್ಲಿ
ಸುಳ್ಳಿನ ಪಾಲಿಸ್ಟರ್ ಎಂಬುದು
ಗಂಟು ಬಿದ್ದಿರುತ್ತೆ
ಸತ್ಯದ
ಬೆಳಕಿನ ಹರಸಿ
ಹೊರಟ ಕ್ಷಣ
ಆಲೋಜನ್ ಬಲ್ಪಿನ
ಬೆಳಕು ಸುಳ್ಳಾಗುತ್ತೆ
ಬದುಕಿನ ಸತ್ಯದ
ಬಗ್ಗೆ ಕೇಳಿದಾಗ
ಬಾಳಟಾದ ವ್ಯವಹಾರದ
ಬಗ್ಗೆ ಸೂಚಿಸಬಹುದು
ಸತ್ಯ ಮತ್ತು ಸುಳ್ಳಿನ
ಗೆರೆ ಬಹಳ ತೆಳುವಾಗಿರುವ
ಕಾರಣ, ಗೆರೆ ಆಳಿಸುವ
ಕೆಲಸ ಕಷ್ಟದ್ದಾಗಿರುತ್ತೆ !
- ನಿಮ್ಮವನು