Saturday, May 18, 2024

ಪ್ರಾಯೋಗಿಕ ಆವೃತ್ತಿ

ಸುಳ್ಳು ಹೇಳಿದ ಪ್ರಧಾನಿಗೆ ‘ಗೋ ಬ್ಯಾಕ್ ಮೋದಿ’ ಅಭಿಯಾನ : ದಸಂಸ

2022ಕ್ಕೆ ಎಲ್ಲರಿಗೂ ಸ್ವಂತಮನೆ ಕೊಡುವ ಅಶ್ವಾಸನೆ ನೀಡಿ ಮೋಸ ಮಾಡಿದ ಪ್ರಧಾನಿ ಮೋದಿ ಅವರೇ ಮಾರ್ಚ್ 12ರಂದು ‘ಮಂಡ್ಯಕ್ಕೆ ಬರಬೇಡಿ’ ಎಂದು ಎಚ್ಚರಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ  (ಎಂ.ಬಿ.ಶ್ರೀನಿವಾಸ್ ಬಣ)ಯು, ‘ಮೋದಿ ಮಂಡ್ಯಕ್ಕೆ ಬಂದರೆ ಗೋ ಬ್ಯಾಕ್ ಅಭಿಯಾನ ನಡೆಸಿ, ಕಪ್ಪು ಬಾವುಟ ಪ್ರದರ್ಶನ’ ಮಾಡುವುದಾಗಿ ಎಚ್ಚರಿಸಿದೆ.

“>

ದೇಶ ಸ್ವಾತಂತ್ರೋತ್ಸವಕ್ಕೆ 75 ವರ್ಷ ತುಂಬುವ ಸಂದರ್ಭದಲ್ಲಿ ಎಲ್ಲಾ ವಸತಿ ರಹಿತರಿಗೂ 2022 ರ ವೇಳೆಗೆ  ಎಲ್ಲರಿಗೂ ಸ್ವಂತ ಮನೆ ನೀಡುವುದಾಗಿ ಪ್ರಧಾನಿ ಮೋದಿ ಅವರು ಹೇಳಿಕೊಂಡಿದ್ದಾರೆ. ಆದರೆ ದೇಶದಲ್ಲಿ ಇನ್ನೂ ಕೋಟ್ಯಾಂತರ ಕುಟುಂಬಗಳು ಸ್ವಂತ ಸೂರಿಲ್ಲದೇ ಬೀದಿಯಲ್ಲಿವೆ. ಕೇವಲ ಪ್ರಚಾರಕ್ಕಾಗಿ ದೊಡ್ಡ ದೊಡ್ಡ ಸುಳ್ಳು ಆಶ್ವಾಸನೆಗಳನ್ನು ನೀಡುವ ಪ್ರಧಾನಿ ಮೋದಿ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ‘ಗೋಬ್ಯಾಕ್ ಮೋದಿ’ ಅಭಿಯಾನ ನಡೆಸಿ, ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ದಸಂಸ ಮುಖಂಡ ಎಂ.ವಿ.ಕೃಷ್ಣ ನುಡಿಕರ್ನಾಟಕ.ಕಾಂಗೆ ತಿಳಿಸಿದ್ದಾರೆ.

ಮಂಡ್ಯ ಜಿಲ್ಲಾಡಳಿತದಿಂದ ವಸತಿ ಫಲಾನುಭವಿಗಳ ಸಮಾವೇಶ ನಡೆಸುತ್ತೇವೆಂದು ಘೋಷಣೆ ಮಾಡಿದ್ದ ಸರ್ಕಾರ, ನಂತರ ಅದನ್ನು ಕೈ ಬಿಡುವ ಮೂಲಕ ಜಿಲ್ಲೆಯ ಜನರನ್ನು ವಂಚಿಸಿತು. ಬಿಜೆಪಿ ಸರ್ಕಾರದ ಇಂತಹ ಜನ ವಿರೋಧಿ ನಡೆಗಳ ವಿರುದ್ಧ ದಸಂಸ ಹೋರಾಟ ಮಾಡಲಿದೆ ಎಂದಿದ್ದಾರೆ.

ಮೋದಿ ನೀಡಿದ ಆಶ್ವಾಸನೆಯು ಸುಳ್ಳಾಗಿದೆ, ದೇಶದ ಜನರನ್ನು ಪ್ರಧಾನಿ ಮೋದಿ ವಂಚಿಸುತ್ತಿದ್ದಾರೆಂದು ಈ ಹಿಂದೆಯೇ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ಕಾಲೆಳೆದಿದ್ದರು. 2022ರ ವೇಳೆಗೆ ಎಲ್ಲರಿಗೂ ಮನೆ, ಗ್ಯಾಸ್ ಸಂಪರ್ಕ, ನಲ್ಲಿ‌, ವಿದ್ಯುತ್, LED ಬಲ್ಪ್ ಕೊಡುವುದಾಗಿ ಮೋದಿ ಅವರು ಶಪಥ ಮಾಡಿದ್ದರು. ಮೋದಿಯವರು ನುಡಿದಂತೆ ನಡೆದಿದ್ದಾರೆಯೇ? 2022 ಕಳೆದು 23ಕ್ಕೆ ಕಾಲಿಟ್ಟಿದ್ದೇವೆ. ಎಲ್ಲಿದ್ದಾವೆ ಮೋದಿಯವರು ಕಟ್ಟಿಸಿದ ಮನೆ? ಎಂದು ಪ್ರಶ್ನಿಸಿದ್ದರು. 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!