Tuesday, May 21, 2024

ಪ್ರಾಯೋಗಿಕ ಆವೃತ್ತಿ

ನಯಪೈಸೆ ತೆಗೆದುಕೊಳ್ಳದೇ ರಾಜ್ ಕುಮಾರ್ ‘ನಂದಿನಿ’ ರಾಯಭಾರಿಯಾಗಿದ್ದು ಏಕೆ ಗೊತ್ತಾ ?

ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಅವರು ಒಂದು ರೂಪಾಯಿಯನ್ನು ಪಡೆಯದೇ ಕೆಎಂಎಫ್ ನ ನಂದಿನಿ ಬ್ರಾಂಡ್ ರಾಯಭಾರಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ವರನಟನನ್ನು ಭೇಟಿಯಾಗಿ ಜಾಹೀರಾತು ಮಾಡಲು KMF ಸಂಸ್ಥೆ ಕೇಳಿಕೊಂಡಿತು. ಸಂಸ್ಥೆಯ ಮಾತಿಗೆ ಓಗೊಟ್ಟ ಡಾ.ರಾಜ್, ಅದೇ ಮೊದಲ ಬಾರಿಗೆ 1996ರಲ್ಲಿ ಒಂದು ರೂಪಾಯಿನ್ನು ಕೂಡಾ ಪಡೆಯದೇ ನಂದಿನಿ ಹಾಲಿನ ರಾಯಭಾರಿಯಾಗಿ ದೂರದರ್ಶನದಲ್ಲಿ ಜಾಹೀರಾತು ಮಾಡಿದರು.

ವಿಶೇಷವೆಂದರೆ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಸಂಸ್ಥೆಗೆ ಜಾಹಿರಾತು ನೀಡದ ಮೇರು ನಟ KMFನ ಸದುದ್ದೇಶಕ್ಕೆ ಮಾರುಹೋಗಿ ಇದೇ ಮೊದಲ ಬಾರಿಗೆ ನಂದಿನಿ ಜಾಹಿರಾತಿನಲ್ಲಿ ಕಾಣಿಸಿಕೊಂಡರು. ಇದು ರೈತರ ಮೇಲೆ ಅವರಿಗೆ ಇರುವ ಕಾಳಜಿ ತೋರುತ್ತದೆ.

ಅಂದು ನಂದಿನ ಹಾಲಿನ ಜಾಹೀರಾತು ರಾಯಭಾರಿಯಾಗಿದ್ದ ಡಾ. ರಾಜ್ ಒಂದು ನಯಾಪೈಸೆ ತೆಗೆದುಕೊಳ್ಳದೆ ರೈತ ಪರ ನಿಂತಿದ್ದರು. ಆದರೆ ಅಂತಹ ಹಿರಿಮೆ ಇರುವ ನಂದಿನಿ ಬ್ರಾಂಡ್ ಅನ್ನು ಉಳಿಸಿಕೊಳ್ಳಲು ಕನ್ನಡಿಗರು ಹೋರಾಟ ಮಾಡಬೇಕಾಗಿ ಬಂದಿದೆ.

ತಂದೆಯ ಹಾದಿಯಲ್ಲೆ ನಡೆದಿದ್ದ ಪುನೀತ್ ರಾಜ್ ಕುಮಾರ್ ಕೂಡ ಒಂದು ರೂಪಾಯಿಯನ್ನು ಸಹ ತಗೆದುಕೊಳ್ಳದೆ ನಂದಿನಿ ಹಾಲಿನ ರಾಯಭಾರಿಯಾಗಿ ಜಾಹೀರಾತು ಮಾಡಿದ್ದರು. ಅಂತಹ ಸಂಸ್ಥೆಯ ಮೇಲೆ ಗುಜರಾತಿಗಳ ಕಣ್ಣು ಬಿದ್ದು, ಅಮೂಲ್ ಹೆಸರಿನಲ್ಲಿ ನಂದಿನಿಯನ್ನು ಮುಳುಗಿಸಲು ಹೊರಟಿದ್ದಾರೆಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಅಮೂಲ್ : ವ್ಯಾಪಕ ಆಕ್ರೋಶ

ಗುಜರಾತಿನ ಅಮೂಲ್ ಹಾಲು, ಮೊಸರನ್ನು ಬೆಂಗಳೂರಿಗೆ ಸರಬರಾಜು ಮಾಡುತ್ತಿರುವುದನ್ನು ಒಕ್ಕೊರಲಿನಿಂದ ವಿರೋಧಿಸುತ್ತಿರುವ ಕನ್ನಡಿಗರು, ಕನ್ನಡ ಚಿತ್ರರಂಗದ ಆರಾಧ್ಯ ದೈವ ಅಣ್ಣಾವ್ರು ಹಾಗೂ ಪುನೀತ್ ರಾಜ್ ಕುಮಾರ್ ಪ್ರಚಾರ ಮಾಡಿದ ಏಕೈಕ ಬ್ರಾಂಡ್ ”ನಂದಿನಿ” ಗೂ ಸಂಕಷ್ಟ ಬಂತೇ ? ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

”ಒಂದಿನ ನಂದಿನಿ ಹೋಗಿ ಅಮುಲ್ ಬಂದು ನಮ್ಮನ್ನಾಳುವ ದಿನ ದೂರವಿಲ್ಲ. ಹೀಗೆ ಮಾಡಿಯೇ ಇಂದು ನಮ್ಮ ವಿಜಯಬ್ಯಾಂಕ್ ಕಳೆದು ಕೊಂಡೆವು. ಇನ್ನು ಹಲವಾರು ಕನ್ನಡಿಗರು ಕಟ್ಟಿದ ಸಂಸ್ಥೆ ಕೈ ತಪ್ಪಿ ಹೋದವು. ಈಗ ನಂದಿನಿ. ಏನು ಧಕ್ಕೆ ಇಲ್ಲ ಅನ್ನೋ ಮಾತು ಇಲ್ಲಿನ ಕೆಎಂಎಫ್ ಅಧಿಕಾರಿಗಳು ಹೇಳ್ತಿರೋದು ಎಲ್ಲಾ ಆದ್ಮೇಲೆ ಬಾಯಿ ಬಡಿದುಕೊಳ್ಳಿ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.

”ಬ್ಯಾಂಕ್ ಆಪ್ ಬರೋಡಕ್ಕಾಗಿ ವಿಜಯ ಬ್ಯಾಂಕ್ ಬಲಿ, ಜೀಯೋಗಾಗಿ ಬಿಏಸ್ಏನ್ಏಲ್ ಗೆ ಅವನತಿಯ ದಾರಿ ಅಮೂಲ್ ಗಾಗಿ ನಂದಿನಿಯ ಬಲಿ ಪಡೆಯುವುದಕ್ಕೆ ಸಜ್ಜಾಗಿದೆ ಎಂದು ವೆಂಕಿ ಅಡಿಗ ಎಂಬುವವರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿದ್ದಾರೆ.

#SaveNandini ಅಭಿಯಾನದಲ್ಲಿ ಕನ್ನಡಿಗರು ಮಾಡಿರುವ ಟ್ವೀಟ್ ಗಳಿವು ನೀವೇ ಓದಿ….

ನಮ್ಮ ಕುಟುಂಬಕ್ಕೆ ಹಲವು ವರ್ಷಗಳ ಕಾಲ ಆಸರೆಯಾಗಿದ್ದದ್ದು ನಮ್ಮ ನಂದಿನಿ. ಅದೆಷ್ಟೋ ರೈತರ, ಬಡವರ ಬದುಕಿಗೆ ಆಧಾರವಾಗಿರುವ ನಂದಿನಿ ಉಳಿಯಲೇಬೇಕು.

ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಯಾವುದೇ ಬ್ರಾಂಡ್ ಬಳಸೋದಿಲ್ಲ, ಅದರಲ್ಲೂ ಗುಜ್ಜುಗಳ ಅಮೂಲ್ ಬಳಸೋದಿಲ್ಲ ಎಂದು ಪ್ರತಿಜ್ಞೆ ಮಾಡೋಣ

ಇಷ್ಟುದಿನ ನಂದಿನಿ ಪದಾರ್ಥಗಳು ಎಲ್ಲೆಡೆ ಸಿಗದಂತೆ ಮಾಡಿ ಕೃತಕ ಅಭಾವ ಸೃಷ್ಟಿಸಿದ್ದಕ್ಕೆ ಕಾರಣವಿದು,ಈಗ ನಂದಿನಿಯ ಜಾಗವನ್ನು ಅಮುಲ್ ಆಕ್ರಮಿಸಲು ಬರುತ್ತಿದೆ, ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸುವ ಮೂಲಕ ಅಮುಲ್ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುವ ಹಾಗೆ ಮಾಡಬೇಕು.

ನಾನು ಅಮುಲ್ ಹಾಲು ಹಾಗೂ ಮೊಸರನ್ನು ಕರಿದಿಸುವುದಿಲ ಎಂದು ಪ್ರತಿಜ್ಞೆ ಮಾಡುತೇನೆ, ಮತ್ತು ನೀವು? ನಿಮ್ಮ ಫ್ರೆಂಡ್ ಟ್ಯಾಗ್ ಮಾಡಿ ಎಂದು ಕನ್ನಡಿಗರು ಗುಡುಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!