ಇಂದಿನಿಂದ ರಾಗಿ ಖರೀದಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ನೀಡಿರುವ ಹಿನ್ನಲೆಯಲ್ಲಿ ನೋಂದಣಿ ಕಾರ್ಯ ಆರಂಭವಾಯಿತು. ನಾಗಮಂಗಲ ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಕಾರ್ಯ ಆರಂಭವಾಯಿತು.
2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ನೊಂದಣಿ ಮಾಡಲಾಗುವುದು. ಆಸಕ್ತ ರೈತರು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯೊಳಗೆ ಬಂದು ತಮ್ಮ ಆಧಾರ್ ಕಾರ್ಡ್ ಜೊತೆಗೆ ಜಮೀನಿನ ಎಫ್ ಐಡಿ ಸಂಖ್ಯೆ ಕೊಟ್ಟು ಬಹುಬೇಗ ನೊಂದಣಿ ಮಾಡಿಕೊಳ್ಳಬೇಕೆಂದು ಅಧಿಕಾರಿಗಳು ಮನವಿ ಮಾಡಿದರು.
2-3 ಎಕರೆ ಇರುವ ಸಣ್ಣ ರೈತರಿಗೆ ಮಾತ್ರ ನೋಂದಣಿ ಅವಕಾಶ ನೀಡಲಾಗಿದ್ದು, ಇದರ ಪ್ರಯೋಜನ ಪಡೆಯಬೇಕೆಂದರು