Saturday, May 18, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ರಾಮಮಂದಿರದ ಮೇಲೆ ದಾಳಿ ನಡೆಸಬಹುದು ; ಸತ್ಯಪಾಲ್ ಮಲಿಕ್ ಸ್ಪೋಟಕ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ಗೆಲ್ಲಲು ದೇಶದಲ್ಲಿ ಗಂಭೀರವಾದ ಅನಾಹುತ ಮಾಡಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜಕೀಯ ಲಾಭ ಪಡೆಯಲು ಬಿಜೆಪಿ ನಾಯಕರು ಯಾವುದೇ ಹಂತಕ್ಕೂ ಹೋಗಬಹುದು ಎಂದು ಒತ್ತಿ ಹೇಳಿದ್ದಾರೆ.

ನ್ಯೂಸ್‌ ಕ್ಲಿಕ್‌ಗೆ ನೀಡಿದ ಸಂದರ್ಶನದಲ್ಲಿ ಮಲಿಕ್ ಅವರು, ”ಪ್ರಧಾನಿ ಮೋದಿ ಅಪಾಯಕಾರಿ ವ್ಯಕ್ತಿಯಾಗಿದ್ದು, ರಾಜಕೀಯ ಲಾಭ ಪಡೆಯಲು ರಾಮ ಮಂದಿರದ ಮೇಲೆ ದಾಳಿ ನಡೆಸಲೂಬಹುದು ಅಥವಾ ಬಿಜೆಪಿಯ ಯಾವುದೇ ಪ್ರಭಾವಿ ನಾಯಕನನ್ನು ಕೊಲ್ಲಲೂಬಹುದು. ಅವರ ಅಂತಹ ಕೆಟ್ಟ ತಂತ್ರಗಳನ್ನು ಮಾಡುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.

“>

ಪ್ರಧಾನಿ ಮೋದಿಯವರ ನಿರ್ದಯ ಚುನಾವಣಾ ತಂತ್ರಗಳನ್ನು ಪ್ರತಿಪಾದಿಸಿದ ಮಲಿಕ್, ”2019ರ ಪುಲ್ವಾಮಾ ದಾಳಿಯನ್ನು ಉಲ್ಲೇಖಿಸಿ, ಇಂತಹ ಘಟನೆಗಳನ್ನು ಉಂಟು ಮಾಡುವವರು ರಾಜಕೀಯ ಉದ್ದೇಶಗಳನ್ನು ಸಾಧಿಸಲು ಇನ್ನೂ ಏನು ಬೇಕಾದರೂ ಮಾಡಬಹುದು” ಎಂದರು.

”ಪ್ರಧಾನಿ ಮೋದಿಗೆ ಹೇಗೆ ಆಡಳಿತ ನಡೆಸಬೇಕು ಮತ್ತು ಹೇಗೆ ನಿರ್ದಯವಾಗಿ ಆಡಳಿತ ನಡೆಸಬೇಕು ಎಂದು ತಿಳಿದಿದೆ. ಆದರೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಯಶಸ್ವಿಯಾಗುವುದಿಲ್ಲ, ಹಾಗಾಗಿ ಅವರು ಈಗಲೇ ರಾಜೀನಾಮೆ ನೀಡುವುದು ಒಳ್ಳೆಯದು” ಎಂದು ಅವರು ಹೇಳಿದರು.

ಈ ಹಿಂದೆ ‘ದಿ ವೈರ್‌’ಗೆ ನೀಡಿದ ಸಂದರ್ಶನದಲ್ಲಿ ಮಲಿಕ್ ಅವರು, ಪುಲ್ವಾಮಾ ದಾಳಿಯ ಬಗ್ಗೆ ಪ್ರಧಾನಿ ಮೋದಿ ಅವರೇ ಮೌನವಾಗಿರಲು ಹೇಳಿದ್ದರು ಎಂದಿದ್ದರು. ಅಲ್ಲಿ ಅವರು ಸಿಆರ್‌ಪಿಎಫ್ ಬೆಂಗಾವಲು ಪಡೆಯನ್ನು ಸಾಗಿಸಲು ವಿಮಾನಗಳನ್ನು ಕೇಳಿದೆ ಆದರೆ ರಕ್ಷಣಾ ಸಚಿವಾಲಯ ನಿರಾಕರಿಸಿತ್ತು. ಅದರಿಂದಲೇ ಆ ಪುಲ್ವಾಮಾ ದುರಂತ ನಡೆಯಿತು ಎಂದು ಹೇಳಿದ್ದರು.

ಯೋಧರ ಪ್ರಾಣಹಾನಿಯಲ್ಲಿ ನಮ್ಮದೇ ತಪ್ಪು ಮತ್ತು ವಿಮಾನಗಳಿಗೆ ಅನುಮತಿ ನೀಡುವ ಮೂಲಕ ಆ ದಾಳಿಯನ್ನು ತಡೆಯಬಹುದಿತ್ತು ಎಂದು ಮೋದಿ ಅವರಿಗೆ ಹೇಳಿದ್ದೆ. ಆಗ ಪ್ರಧಾನಿ ಮೋದಿ ಅವರು, ದಾಳಿಗೆ ಕಾರಣವಾದ ಲೋಪಗಳ ಬಗ್ಗೆ ಮೌನವಾಗಿಸಿದರು. 2019ರಲ್ಲಿ ದಾಳಿ ನಡೆದಾಗ ಮಲಿಕ್ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು.

ಈ ಮಧ್ಯೆ ಮಲಿಕ್ ಅವರು ಮಣಿಪುರ ಹಿಂಸಾಚಾರವನ್ನು ಪ್ರಸ್ತಾಪಿಸಿದರು, ಸರ್ಕಾರವು ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದರು.

ಈ ಹೇಳಿಕೆಯ ಮೇಲೆ ಇಷ್ಟೊಂದು ವಿಶ್ವಾಸ ಹೊಂದಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ, ಅದಕ್ಕೆ ಉತ್ತರವಾಗಿ ಮಲಿಕ್, ಹಿಂಸಾಚಾರದಲ್ಲಿ ಬಳಸುತ್ತಿರುವ ಅಸ್ತ್ರಗಳು ಜನಸಾಮಾನ್ಯರಿಗೆ ಸುಲಭವಾಗಿ ಕೈಗೆಟುಕುವುದಿಲ್ಲ ಎಂದರು.

ಇನ್ಸಾಸ್ ರೈಫಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ, ಆದರೆ ಸರ್ಕಾರದ ಪದಾತಿ ದಳದಲ್ಲಿ ಲಭ್ಯವಿವೆ ಎಂದು ಅವರು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಮಣಿಪುರದಲ್ಲಿ ಜನಸಮೂಹವು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದೆ ಎಂಬ ಹೇಳಿಕೆಗಳನ್ನು ಅವರು ತಳ್ಳಿಹಾಕಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!