Saturday, May 18, 2024

ಪ್ರಾಯೋಗಿಕ ಆವೃತ್ತಿ

‘ಸ್ವಾಮಿ ಕೈಮುಗಿದು ನಿಮ್ಮ ಕಾಲಿಗೆ ಬಿಳ್ತೀನಿ, ಅಕ್ರಮ ಮದ್ಯ ಮಾರಾಟ ನಿಲ್ಲಿಸಿ’ ಎಂದು ಬೇಡಿಕೊಂಡ ವೃದ್ಧೆ


  • ನನ್ನ ಮೊಮ್ಮಗ ಕುಡಿದು ಸಾಯುವ ಸ್ಥಿತಿ ತಲುಪಿದ್ದಾನೆ ಎಂದು ಅಳಲು ತೋಡಿಕೊಂಡ ವೃದ್ಧೆ 

  • ಗ್ರಾಮೀಣ ಪ್ರದೇಶದಲ್ಲಿ ಯಥೇಚ್ಚವಾಗಿ ಮದ್ಯ ಮಾರಾಟ : ದಾರಿ ತಪ್ಪಿದ ಯುವ ಸಮೂಹ

ಸ್ವಾಮಿ ಕೈಮುಗಿದು ನಿಮ್ಮ ಕಾಲಿಗೆ ಬಿಳ್ತೀನಿ, ದಯವಿಟ್ಟು ಊರಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿ ಮಕ್ಕಳನ್ನು ರಕ್ಷಿಸಬೇಕೆಂದು ವೃದ್ದೆಯೊಬ್ಬರು ಅಬಕಾರಿ ಇಲಾಖೆ ಅಧಿಕಾರಿಗಳ ಕಲಿಗೆ ಬಿದ್ದು ಬೇಡಿಕೊಂಡ  ಘಟನೆ ಮಳವಳ್ಳಿ ತಾಲ್ಲೂಕು ಕಚೇರಿಯಲ್ಲಿ ನಡೆದಿದೆ.

ಗ್ರಾಮೀಣ ಪ್ರದೇಶದಲ್ಲಿ ಅಕ್ರಮಮದ್ಯ ಮಾರಾಟವನ್ನು ನಿಲ್ಲಿಸುವಂತೆ ಒತ್ತಾಯಿಸಿ ರಾಗಿ ಬೊಮ್ಮನಹಳ್ಳಿ ಗ್ರಾಮಸ್ಥರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಅಧಿಕಾರಗಳ ಬಳಿ ಧಾವಿಸಿ ಅಬಕಾರಿ ಅಧಿಕಾರಿಯ ಕಾಲಿಗೆ ಬಿದ್ದ ವೃದ್ದೆ ನನ್ನ ಮೊಮ್ಮಗ ಕುಡಿದು ಸಾಯುವ ಸ್ಥಿತಿ ತಲುಪಿದ್ದಾನೆ, ದಯವಿಟ್ಟು ಮದ್ಯ ಮಾರಾಟವನ್ನು ನಿಲ್ಲಿಸಬೇಕೆಂದು ಕೋರಿದರು.

ರಾಗಿಬೊಮ್ಮನಹಳ್ಳಿ ಯುವ ಮುಖಂಡ ಮಹದೇವಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಯಥೇಚ್ಚವಾಗಿ ಎಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಕೋರಿದರು.

ಗ್ರಾಮೀಣ ಪ್ರದೇಶದ ಪೆಟ್ಟಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯವನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ಮದ್ಯ ಮಾರಾಟದಿಂದ ಯುವ ಸಮೂಹ ದಾರಿ ತಪ್ಪುತ್ತಿದ್ದಾರೆ, ಮತ್ತೊಂದೆಡೆ ಗ್ರಾಮದಲ್ಲಿ ಆಶಾಂತಿ ಸೃಷ್ಟಿಯಾಗುತ್ತಿದೆ, ನಮ್ಮ ಮನೆಯ ಮಕ್ಕಳು ದುಡಿದ ಹಣವನ್ನೆಲ್ಲವನ್ನೂ ಕುಡಿತಕ್ಕೆ ವ್ಯಯ ಖರ್ಚು ಮಾಡುತ್ತಿದ್ದಾರೆ, ಸಂಸಾರ ಸಾಗಿಸಲು ಮಹಿಳೆರು ಕಷ್ಟ ಪಡುತ್ತಿದ್ದಾರೆ, ಕೂಡಲೇ ಇದಕ್ಕೆ ಕಡಿವಾಣ ಹಾಕುವಂತೆ ಪ್ರಭಾರ ತಹಶೀಲ್ದಾರ್ ಬಿ.ವಿ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿ ತಹಶೀಲ್ದಾರ್ ತೆರಳಿದ ನಂತರ ಸ್ಥಳದಲ್ಲಿದ್ದ ಅಬಕಾರಿ ಇನ್ಸ್ ಪೆಕ್ಟರ್ ರಾಮು ಅವರಿಗೆ ಕಾಲಿಗೆ ಬೀಳಲು ಗ್ರಾಮದ ವೃದ್ಧೆಯೊಬ್ಬರು ಮುಂದಾದರು. ಈ ವೇಳೆ ಅಬಕಾರಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಗ್ರಾಮದಲ್ಲಿನ ಮದ್ಯ ಮಾರಾಟವನ್ನು ತಡೆಗಟ್ಟಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಚಿಕ್ಕರಾವಳಯ್ಯ, ಸಿದ್ದರಾಜು, ಪ್ರಕಾಶ್, ಮಹದೇವಸ್ವಾಮಿ, ಚನ್ನಾಜಮ್ಮ, ಮಲ್ಲಾಜಮ್ಮ, ಗೌರಮ್ಮ, ಚನ್ನಾಜಮ್ಮ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!