Thursday, May 16, 2024

ಪ್ರಾಯೋಗಿಕ ಆವೃತ್ತಿ

ನಾಡಿಗೆ ಅಪಾರ ಕೊಡುಗೆ ನೀಡಿದ ನಾಲ್ವಡಿ ದೇಶಕ್ಕೆ ಮಾದರಿ – ತಗ್ಗಹಳ್ಳಿ ವೆಂಕಟೇಶ್

ದೇಶದಲ್ಲಿನ ರಾಜಮನೆತನಗಳ ಆಳರಸರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಎಂದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಪಿಇಎಸ್ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು ಪ್ರಾಂತ್ಯವನ್ನಾಳಿದ ಒಡೆಯರ್ ವಂಶದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವು ಬ್ರಿಟೀಷರ ಆಡಳಿತದೊಂದಿಗೆ ಅಪಾರ ಕೊಡುಗೆ ನೀಡಿದೆ, ಜನಾನುರಾಗಿ, ಸಾಮಾನ್ಯರ ಕಷ್ಟಗಳನ್ನು ನೀಗಿದ ರಾಜಮನೆತಗಳ ಆಳರಸರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿಯಾಗಿದ್ದಾರೆ ಎಂದು ನುಡಿದರು.

ನಾಲ್ವಡಿ ಅವರ ಆಡಳಿತವು ಸುವರ್ಣಾಕ್ಷರಗಳಿಂದ ಬರೆದಿಡುವಷ್ಟು ಕೊಡುಗೆಗಳನ್ನು ನಾಡಿಗೆ ನೀಡಿದೆ, ಮಂಡ್ಯ ಜಿಲ್ಲೆಯನ್ನು ಹಸಿರು ಮಾಡಲು ಪಟ್ಟ ಪಣಕ್ಕೆ ಜಿಲ್ಲೆಯ ಜನತೆ ಸದಾ ಚಿರಋಣಿಯಲ್ಲಿರುತ್ತೇವೆ ಎಂದು ಹೇಳಿದರು.
ಮಹಾತ್ಮ ಗಾಂಧಿಜೀ ಅವರಿಂದ ರಾಜರ್ಷಿ ಎಂದು ಕರೆಸಿಕೊಂಡ ಮಹಾನ್‌ ವ್ಯಕ್ತಿಯನ್ನು ನಾವು ಇಂದು ಅವರ ಸ್ಮರಣೆ ದಿನದಲ್ಲಿ ಸ್ಮರಿಸಿಕೊಳ್ಳುತ್ತಿದ್ದೇವೆ, ಇಂದು ಅವರ ಕಾಲವಾಗಿ ಹಲವು ದಶಕಗಳೇ ಕಳೆದರೂ ಜನರ ಮಾನಸಲ್ಲಿ ಉಳಿದಿದ್ದಾರೆ, ಅನ್ನದಾತರಾಗಿ ನೆಲೆಸಿದ್ದಾರೆ ಎಂದು ಸ್ಮರಿಸಿಕೊಂಡರು.

ಜಾಹೀರಾತು

ಶಿಕ್ಷಣ, ಉದ್ಯೋಗ, ಸಮಾಜಸುಧಾರಣೆ ಕಾರ್ಯಗಳು, ಅನಿಷ್ಠ ಪದ್ದತಿಗಳಿಗೆ ಹೊಸ ಕಾನೂನು ರೂಪಿಸಿ, ಮೀಸಲಾತಿ ನೀಡಿ ಶೋಚಿತ ಸಮುದಾಯಗಳಿಗೆ ಆಧ್ಯತೆ ನೀಡಿದ್ದು, ಕನ್ನಂಬಾಡಿ ಕಟ್ಟೆ ಕಟ್ಟಿ ನೀರು ಹರಿಸಿ, ಭತ್ತ-ರಾಗಿ, ಕಬ್ಬು ಬೆಳೆಯುವಂತೆ ಆರ್ಥಿಕ ಚೇತರಿಕೆಗೆ ನಾಂಧಿಯಾಗಿದ್ದು, ಕಾರ್ಖಾನೆಗಳನ್ನು ನಿರ್ಮಿಸಿ, ವಿದ್ಯುತ್ ನೀಡಿದ್ದು, ಸಾಹಿತ್ಯ, ಬ್ಯಾಂಕ್, ವಿಶ್ವವಿದ್ಯಾನಿಲಯಗಳನ್ನು ಕಟ್ಟಿಸಿದ ಕೀರ್ತಿ ಇವರಿಗೇ ಸಲ್ಲುತ್ತದೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಮ.ರಾಮಕೃಷ್ಣ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಉಪನ್ಯಾಸ ನೀಡಿ, ನಾಲ್ವಡಿ ಅವರ ಜೀವನಚರಿತ್ರೆ, ಸಾಧನೆಗಳನ್ನು ವಿಸ್ತಾರವಾಗಿ ವಿವರಿಸಿದರು. ಗಾಯಕರಾದ ವೈರಮುಡಿ, ಸಂತೆಕಸಲಗೆರೆ ಬಸವರಾಜ್, ಆಲದಹಳ್ಳಿ ಮಂಜುಳಾ, ಟಿ.ಡಿ.ನಾಗರಾಜ್ ತಂಡ ವಿವಿಧ ಕ್ರಾಂತಿ, ಜಾಗೃತಿಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಮಹಾಲಿಂಗೇಗೌಡ, ನೆಲದನಿ ಬಳಗ ಅಧ್ಯಕ್ಷ ಮಂಗಲ ಲಂಕೇಶ್, ಮಂಜು, ತಗ್ಗಹಳ್ಳಿ ಲೋಕೇಶ್, ದೇವೇಗೌಡ, ದ.ಕೋ.ಚಂದ್ರಶೇಖರ್, ಸಂತೆಕಸಲಗೆರೆ ಜಗದೀಶ್, ಕುಮಾರ್‌ಗೌಡ, ಮಹಾದೇವ, ಸಚ್ಚಿನ್, ಅರಕೆರೆ ಸಿದ್ದರಾಜು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!