Sunday, May 19, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆ| ಸಂಜೆ 5.30ಕ್ಕೆ ಉತ್ತರ ಕರ್ನಾಟಕದಲ್ಲಿ ಶೇ.66.05 ಮತದಾನ

ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆದ ರಾಜ್ಯದ ಎರಡನೇ ಹಂತದ ಮತದಾನ ಬಹುತೇಕ ಕಡೆ ಶಾಂತಿಯುವಾಗಿ ನಡೆದಿದ್ದು, ಸಂಜೆ 5 ಗಂಟೆ 30 ನಿಮಿಷ ಹೊತ್ತಿಗೆ ರಾಜ್ಯದಲ್ಲಿ ಶೇ.66.05ರಷ್ಟು ಮತದಾನ ಕಂಡುಬಂದಿದೆ.

ಚಿಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ.72.75 ರಷ್ಟು ಮತದಾನವಾಗಿದ್ದು 14 ಕ್ಷೇತ್ರಗಳ ಪೈಕಿ ಇದು ಮೊದಲ ಸ್ಥಾನದಲ್ಲಿದೆ. ಶಿವಮೊಗ್ಗದಲ್ಲಿ ಶೇ.72.07, ಹಾವೇರಿಯಲ್ಲಿ ಶೇ.71.90 ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶೇ.70.90ರಷ್ಟು ಮತದಾನವಾಗಿದೆ.

ಗುಲ್ಬರ್ಗಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದ್ದು, ಶೇ.57.20ರಷ್ಟು ಮತದಾನವಾಗಿದೆ. ರಾಯಚೂರು ಶೇ.59.48, ಬಿಜಾಪುರದಲ್ಲಿ ಶೇ.60.95 ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ 65.55ರಷ್ಟು ಮತದಾನವಾಗಿದೆ.

ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, 6 ಗಂಟೆ ಒಳಗಡೆ ಮತಗಟ್ಟೆಯಲ್ಲಿರುವ ಮತದಾರರು ಮತಚಲಾಯಿಸಲಿದ್ದಾರೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? (5.30ರವರೆಗಿನ ವಿವರ)

ಚಿಕೋಡಿ ಲೋಕಸಭಾ ಕ್ಷೇತ್ರ- ಶೇ.72.75
ಬೆಳಗಾವಿ ಲೋಕಸಭಾ ಕ್ಷೇತ್ರ- ಶೇ.65.67
ಬಾಗಲಕೋಟೆ ಲೋಕಸಭಾ ಕ್ಷೇತ್ರ- ಶೇ.65.55
ಬಿಜಾಪುರ ಲೋಕಸಭಾ ಕ್ಷೇತ್ರ- ಶೇ.60.95
ಗುಲಬರ್ಗಾ ಲೋಕಸಭಾ ಕ್ಷೇತ್ರ- ಶೇ.57.20
ರಾಯಚೂರು ಲೋಕಸಭಾ ಕ್ಷೇತ್ರ- ಶೇ.59.48
ಬೀದರ್‌ ಲೋಕಸಭಾ ಕ್ಷೇತ್ರ- ಶೇ.60.17
ಕೊಪ್ಪಳ ಲೋಕಸಭಾ ಕ್ಷೇತ್ರ- ಶೇ.66.05
ಬಳ್ಳಾರಿ ಲೋಕಸಭಾ ಕ್ಷೇತ್ರ- ಶೇ.68.94
ಹಾವೇರಿ ಲೋಕಸಭಾ ಕ್ಷೇತ್ರ- ಶೇ.71.90
ಧಾರವಾಡ ಲೋಕಸಭಾ ಕ್ಷೇತ್ರ- ಶೇ.67.15
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ- ಶೇ.69.57
ದಾವಣಗೆರೆ ಲೋಕಸಭಾ ಕ್ಷೇತ್ರ- ಶೇ.70.90
ಶಿವಮೊಗ್ಗ ಲೋಕಸಭಾ ಕ್ಷೇತ್ರ- ಶೇ.72.07

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!