Saturday, May 18, 2024

ಪ್ರಾಯೋಗಿಕ ಆವೃತ್ತಿ

ಮೋದಿ ವಿರುದ್ದ ವಾರಾಣಸಿಯಿಂದ ಸ್ಪರ್ಧಿಸುತ್ತಿರುವ ಮತ್ತೊಬ್ಬ ಮೋದಿ !

ಶ್ಯಾಮ್ ರಂಗೇಲಾ ಪ್ರಧಾನಿ ಮೋದಿಜಿಯವರ ತರಹ ಮಿಮಿಕ್ರಿ ಮಾಡುವ ಮಿಮಿಕ್ರಿ ಕಲಾವಿದ ವಾರಾಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

2014 ರಲ್ಲಿ ಮೋದಿಜೀ ಅಭಿಮಾನಿಯಾಗಿದ್ದ ಮೂಲತಃ ರಾಜಸ್ಥಾನದ ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯ ಶ್ಯಾಮ್ ರಂಗೇಲಾ ನಂತರ ಮೋದಿಜೀಯ ಅಭಿಮಾನದಿಂದ ಹಲವು ಕಾಲೇಜು ಕಾರ್ಯಕ್ರಮಗಳಲ್ಲಿ ಮೋದಿಜೀ ಧ್ವನಿಯನ್ನು ಅನುಕರಣೆ ಮಾಡುತ್ತ ಪ್ರಸಿದ್ಧಿ ಪಡೆದು ಹಿಂದಿಯ ಪ್ರಮುಖ ಕಾಮಿಡಿ ಶೋ ಒಂದರಲ್ಲಿ ಭಾಗವಹಿಸಿ ಮೋದಿಜೀಯ ಪ್ರಸಿದ್ದ ” ಬಾಯಿಯೋ ಔರ್ ಬಾಯೇನೋ” ಎನ್ನುವ ಮಿಮಿಕ್ರಿ ಮಾಡುವ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದರು.

ಆದರೆ ಆ ಖ್ಯಾತ ಕಾಮಿಡಿ ಶೋ ಗೆ ಸರ್ಕಾರದ ಸೆನ್ಸಾರ್ ಮಂಡಳಿ ಅನುಮತಿ ನೀಡದ ಕಾರಣದಿಂದ ಯಾವತ್ತೂ ಪ್ರಸಾರವಾಗಲೇ ಇಲ್ಲ, ಅಂದಿನಿಂದ ಮೋದಿ ಭ್ರಮೆಯಿಂದ ಹೊರ ಬಂದ ಶ್ಯಾಮ್ ತನ್ನದೆ ಯೂಟ್ಯೂಬ್  ಚಾನೆಲ್ ಪ್ರಾರಂಭಿಸಿ ಅದರಲ್ಲಿ ಮೋದಿಜಿ ನವಿಲುಗಳಿಗೆ ಕಾಳು ಹಾಕುವುದು, ಪೆಟ್ರೋಲ್ ಪಂಪ್ ನಲ್ಲಿ ಮೋದಿಜಿಗೆ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡುವುದು, ಅಕ್ಷಯ್ ಕುಮಾರ್ ಮೋದಿಜೀ ಅವರನ್ನು ಸಂದರ್ಶನ ಮಾಡುವುದು, ಸಮುದ್ರ ತೀರದಲ್ಲಿ ಕಸ ಹೆಕ್ಕುವುದು ಎಲ್ಲವನ್ನು ಮಿಮಿಕ್ರಿ ಮಾಡಿದ್ದಾರೆ.

“>

 

ಈ ತರಹದ ವಿಡಿಯೋ ಮಿಮಿಕ್ರಿಗಳಿಗೆ ಮೋದಿ ಭಕ್ತರಿಂದ ಬೈಗುಳ, ಕಿರುಕುಳ, ಪೋಲಿಸ್ ಕೇಸ್, ನೋಟೀಸ್ ಎಲ್ಲಾ ಪಡೆದಿರುವ ಶ್ಯಾಮ್ ಈಗ ನಾನು ಮೋದಿಜೀ ವಿರುದ್ದ ವಾರಾಣಸಿ ಯಿಂದ ಸ್ಪರ್ದೆ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.

ಸೂರತ್, ಇಂದೋರ್ ನಲ್ಲಿ ಎದುರಾಳಿಗಳೇ ಇಲ್ಲದಂತೆ ಮಾಡಿರುವ ಕಾರಣ ನಾನು ಮೋದಿಜೀ ವಿರುದ್ಧ ಅಂತಿಮ‌ ಕ್ಷಣದವರೆಗೂ ಹೋರಾಡಲು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ದೇಶದ ಅತ್ಯಂತ ಪ್ರಭಾವಿ ನಾಯಕ ಮೋದಿಜೀ ವಿರುದ್ದ ಅತ್ಯಂತ ಸಾಮಾನ್ಯ ಮಿಮಿಕ್ರಿ ಕಲಾವಿದ ಸ್ಪರ್ಧಿಸುತ್ತಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!