Friday, June 21, 2024

ಪ್ರಾಯೋಗಿಕ ಆವೃತ್ತಿ

ಬರ ನಿರ್ವಹಣೆ ಪರಿಣಾಮಕಾರಿಗೊಳಿಸಲು ಆಗ್ರಹ : ಪ್ರಗತಿಪರ ಸಂಘಟನೆಗಳ ಒಕ್ಕೂಟ

ರಾಜ್ಯಕ್ಕೆ ಎದುರಾಗಿಹ ಬೀಕರ ಬರಗಾಲವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿ ಕೃಷಿಕ ಹಾಗು ಕೃಷಿ ವಲಯ ರಕ್ಷಿಸುವಂತೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಮದ್ದೂರಿನ  ಪ್ರಗತಿಪರ ಸಂಘಟನೆಗಳ ಒಕ್ಕೂಟವು ತೀರ್ಮಾನಿಸಿತು.

ಪಟ್ಟಣದ ಪಿಕಾರ್ಡ್ ಬ್ಯಾಂಕ್ ನ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ಬರಪರಿಹಾರ ಹೀಗಿರಲಿ ಚಿಂತನಾ ಕಾರ್ಯಕ್ರಮದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಈ ತೀರ್ಮಾನ ಕೈಗೊಂಡಿತು.

ಕಳೆದ ಐವತ್ತು ವರ್ಷಗಳಲ್ಲಿ ಕಂಡರಿಯದ ಭೀಕರ ಬರಗಾಲ ಎದುರಾಗಿದ್ದು ಇಂತಹ ಸಮಯದಲ್ಲಿ ಸಮರೋಪದಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಸರ್ಕಾರಗಳು ನೀತಿ ಸಂಹಿತೆ ನೆಪದಲ್ಲಿ ಕಾಲಹರಣ ಮಾಡಿತಿರುವ ಕ್ರಮವು ಖಂಡನೀಯ ಎಂದು ಸಭೆಯು ಅಭಿಪ್ರಾಯಪಟ್ಟಿತು.

ಪ್ರಧಾನಮಂತ್ರಿ ಫಸಲ್ ಭೀಮಾಯೊಜನೆಯಡಿ ರಾಗಿಬೆಳೆಗೆ ವಿಮೆಮಾಡಿಸಿಧ್ದ ರೈತರಿಗೆ ರಾಗಿಫಸಲು ಹಾಳಾಗಿ ಒಂದು ವರ್ಷ ಕಳೆದಿದ್ದರೂ  ಇದುವರೆಗೂ ಯಾವುದೇ ವಿಮೆ ಹಣ ತುಂಬಿಲ್ಲಾ. ಹೀಗಾದರೇ ಯೊಜನೆ ಉದ್ದೇಶವು ಈಡೇರುವುದಿಲ್ಲಾ ಮತ್ತು ಬರಗಾಲದಿಂದ ಕಂಗಾಲದ ರೈತ ಉಳಿಯುವ ಬಗೆ ಹೇಗೆ ಎಂದು ಸಭೆಯು ಕಳವಳ ವ್ಯಕ್ತಪಡಿಸಿತು.

ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನವನ್ನು ಕಳೆದ ಐದಾರು ತಿಂಗಳಿನಿಂದ ಕೊಡದೆ ಇರುವ ಕ್ರಮ ಸರಿಯಲ್ಲ. ಬರದಿಂದ ಬಸವಳಿದಿರುವ ಹೈನುಗಾರರಿಗೆ ಈ ಕೂಡಲೆ ಇತರೆ ಎಲ್ಲಾ ಬಾಕಿ ಹಣವನ್ನು ಶೀಘ್ರ ಪಾವತಿಗೆ ಕ್ರಮವಹಿಸುವಂತೆ ಸರ್ಕಾರದ ಗಮನ ಸೆಳೆಯಲು ಸಭೆ ಒಕ್ಕೂರಲಿನಿಂದ ತೀರ್ಮಾನಿಸಿತು.

ಹೀಗಾಗಲೆ ಕೃಷಿ ಇಲಾಖೆ ವತಿಯಿಂದ ಬೆಳೆನಷ್ಠದ ವರದಿ ಸಲ್ಲಿಕೆಯಾಗಿದ್ದು ಇನ್ನಾದರು ಸರ್ಕಾರ ಬರಪರಿಹಾರ ಹಣ ಪಾವತಿಗೆ ಮುಂದಾಗುವ ಮೂಲಕ ರೈತರ ಹಿತಕಾಯಬೇಕು. ತೋಟಗಾರಿಕೆ ಬೆಳೆಗಳಾಧ ತೆಂಗು, ಅಡಿಕೆ ಬೆಳೆಗಳನ್ನು ಬರ ಪರಿಹಾರದ ವ್ಯಾಪ್ತಿಗೆ ತರಬೇಕು ಎಂದು ಸಭೆ ಅಗ್ರಹಿಸಿ, ಸರ್ಕಾರದ ಗಮನಸೆಳೆಯಲು ತಹಶೀಲ್ದಾರರ ಕಛೇರಿಯಲ್ಲಿ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲು ತಾಲೂಕು ಆಡಳಿತಕ್ಕೆ ಮನವಿ ಮಾಡಲು ಸಭೆ ತೀರ್ಮಾನಿಸಿತು.

ಬರದ ಬೇಗೆಯಲ್ಲಿ ನೊಂದಿದ್ದ ರೈತರು ಹಗಲಿರಳು ಕಷ್ಟ ಪಟ್ಟು ರಕ್ಷಿಸಿದ್ದ ಬಾಳೆ ನೆನ್ನೆ ಬೀಸಿದ ಗಾಳಿಗೆ ನೆಲಕಚ್ಚಿದ್ದು ಕೂಡಲೆ ಪರಿಹಾರಕ್ಕೆ ಕ್ರಮಕ್ಕೆ ಆಗ್ರಹಿಸಲಾಯಿತು.

ಜಾನುವಾರುಗಳಿಗೆ ಮೇವಿನ ಬ್ಯಾಂಕ್ ತೆಗೆಯಬೇಕು ಮುಂದಿನ ಹಂಗಾಮಿಗೆ ಉಚಿತವಾಗಿ ಕಬ್ಬಿನ ಬಿತ್ತನೆ ಹಾಗೂ ಭತ್ತ ರಾಗಿ ಇತರೆ ಕಾಳಿನ ಬೀಜ ವಿತರಣೆಗೆ ಕ್ರಮವಹಿಸಬೇಕು.

ಸ್ವ ಸಹಾಯ ಸಂಘಗಳು ಸೇರಿ ಕೃಷಿಕರು ಕೃಷಿಕಾರ್ಮಿಕರ ಸಾಲದ ಕಂತಿನ ಪಾವತಿ ಬರಕಳೆಯುವವರೆಗೆ ವಿಸ್ತರಿಸಲು ಕ್ರಮವಹಿಸುವುದು ಸೇರಿ ಶೈಕ್ಷಣಿಕ ನೆರವು ಅಗಬೇಕೆಂದು ಸಭೆ ಸರ್ಕಾರವನ್ನು ಆಗ್ರಹಿತು

ಕಂದಾಯ ಕೃಷಿ, ತೋಟಗಾರಿಕೆ, ಪಶುಪಾಲನೆ ಇಲಾಖೆ ಅಧಿಕಾರಿಗಳು ಸಭೆಗೆ ಆಗಮಿಸಿ ಬರ ನಿರ್ವಹಣೆಗೆ ಅನುಸರಿಸುತ್ತಿರುವ ಮಾಹಿತಿ ನೀಡಿದರು.

ಸಭೆಯಲ್ಲಿ ಟಿ. ಎಸ್. ಪ್ರಸನ್ನ.ಕುಮಾರ, ದಯಾನಂದ, ಶ್ರೀ. ಕಾ. ಶ್ರೀನಿವಾಸ್ ಸೊ. ಶಿ. ಪ್ರಕಾಶ್, ಉಮೇಶ್, ಕೊತ್ತನಹಳ್ಳಿ, ಮಹೇಂದ್ರ ಅಣ್ಣೂರು, ಕೀಳಘಟ್ಟ ನಂಜುಂಡಯ್ಯ, ಮರಳಿಗ ಶಿವರಾಜ್, ದೇಶಹಳ್ಳಿ ಬೊರಣ್ಣ, ವಳಗೆರೆಹಳ್ಳಿ ವೆಂಕಟೇಶ, ಉಮಾಶಂಕರ್, ‍ಚನ್ನಪ್ಪ ಉಪ್ಪಿನಕೆರೆ ಶಿವರಾಮ್. ಸಕ್ಕರೆ ನಾಗರಾಜ್, ರಾಖೇಶ್ ಕುದರಗುಂಡಿ, ದೇಶಹಳ್ಳಿ ಶಿವಪ್ಪ, ಚಂದೂಪೂರ ಶಿವಲಿಂಗೇಗೌಡ, ಗೋಪಾಲ್ ತಗ್ಗಹಳ್ಳಿ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!