Saturday, May 18, 2024

ಪ್ರಾಯೋಗಿಕ ಆವೃತ್ತಿ

ಮೊಬೈಲ್ ವ್ಯಾಮೋಹಕ್ಕೆ ಮಕ್ಕಳು ದಾರಿತಪ್ಪುತ್ತಿದ್ದಾರೆ: ಶಿವಬಸವ ಸ್ವಾಮೀಜಿ

ಮೊಬೈಲ್ ವ್ಯಾಮೋಹಕ್ಕೆ ನಮ್ಮ ಮನೆಯ ಮಕ್ಕಳು ದಾರಿತಪ್ಪುತ್ತಿದ್ದಾರೆ ಈಗಾಲೇ ಪೋಷಕರು ಎಚ್ಚರ ವಹಿಸದಿದ್ದಾರೆ ನಾವೆಲ್ಲ ಮುಂದೆ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷರಾದ ಶಿವಬಸವ ಸ್ವಾಮೀಜಿ ಹೇಳಿದರು.

ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಸ್ಕ್ಯಾನ್‌ ಫೋರ್ಡ್ ಪಬ್ಲಿಕ್ ಶಾಲೆ ಹಾಗೂ ಎಸ್ ಕೆ ಇವೆಂಟ್ ಮ್ಯಾನೇಜ್ಮೆಂಟ್ ಸಹಕಾರದಲ್ಲಿ ನಡೆದ ಚಿಣ್ಣರಲೋಕ ಮಕ್ಕಳ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊಬೈಲ್ ಪೋನ್ ಎಷ್ಟು ಅನುಕೂಲವಾಗಿದೆಯೋ ಅಷ್ಟೇ ಅಪಾಯಕಾರಿಯೂ ಹೌದು, ನಮ್ಮ‌ ಮಕ್ಕಳ ಉಜ್ವಲ ಭವಿಷ್ಯವನ್ನ ಬಲಿ ಪಡೆಯುತ್ತಿದೆ. ಮಕ್ಕಳ ವಿದ್ಯಾಭ್ಯಾಸ ಪೋನ್ ಸಹಕಾರಿಯಾಗುವುದಕಿಂತ ಹೆಚ್ಚು ಮಾರಕವಾಗುತ್ತಿದೆ ಎಂದರು.

ಈಗಾಗಲೇ ಅತಿಹೆಚ್ಚು ಪೋನ್ ಬಳಿಕೆಯಿಂದ ಸಾವಿರಾರು ವಿದ್ಯಾರ್ಥಿಗಳು ದಾರಿತಪ್ಪಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಅವರ ಭವಿಷ್ಯದ ಕನಸು ನುಚ್ಚು ನೂರಾಗಿದೆ. ಪೋಷಕರೇ ತಾವು ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸದಿದ್ದಾರೆ ತಮ್ಮ ಮಕ್ಕಳ ಭವಿಷ್ಯದ ಜತೆಗೆ ದೇಶದ ಭವಿಷ್ಯವು ಹಾಳಾಗಲಿದೆ. ಮಕ್ಕಳ ಭವಿಷ್ಯಕ್ಕೆ ಗ್ರಾಮೀಣಾ ಕ್ರೀಡೆಗಳು ಸಹಕಾರಿಯಾಗಲಿದೆ. ಬೇಸಿಗೆಯಂತಹ ಸಂಧರ್ಬದಲ್ಲಿ ಚಿಣ್ಣರ ಲೋಕದಂತಹ ಶಿಬಿರಗಳು ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಲಿದೆ. ಈ‌ ಶಿಬಿರ ನನ್ನಗೆ ನನ್ನ ಬಾಲ್ಯವನ್ನು ನೆಪಿಸುತ್ತಿದೆ.ನಾವು ಮಠದಲ್ಲಿ ಕಳೆದ ನೆನಪುಗಳು ಇಂದಿಗೂ ಸಂತೋಷ ಕೊಡತ್ತದೆ. ಮಕ್ಕಳಿಗೆ ಅವರ ಬಾಲ್ಯ ಗೋಲ್ಡನ್ ಲೈಫ್ ಇದ್ದಂತೆ ಎಂದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ‌ನಟ ಶಿಶಿರ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಲೋಹಿತ್, ಹಾಸ್ಯ ನಟ ಕೇಶವ್, ರಾಮಾನಾಥ್ , ಉಮಾಖ್ಯಾತ್ಯಯಿನಿ, ಲಯನ್ ಅಧ್ಯಕ್ಷ ರೇವಣ್ಣ, ಪ್ರಗತಿ‌ಸೇವಾ ಟ್ರಸ್ಟ್ ಅಧ್ಯಕ್ಷ ಡಾ ನಾಗೇಶ್ ರಾಗಿಮುದ್ದನಹಳ್ಳಿ, ಪ್ರೋ ನಂಜುಂಡ ಸ್ವಾಮಿ, ಸಾಹಿತ ಚಂದ್ರಶೇಖರಯ್ಯ, ಡಾ ಸೌಮ್ಯ ಚೇತನ, ಅಮಿತ್ ಮಧುಪ್ರಭಾ, ಅಮಿತಾ ಕೃಷ್ಣ, ಕುಮಾರ ಬೀರಶೆಟ್ಟಹಳ್ಳಿ, ಜಯರಾಮು ಪಾಲ್ಗೊಂಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!