Monday, April 29, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಮದ್ಯಪಾನ ಮಾಡಿ ಅಡ್ಡಾದಿಡ್ಡಿ ಕಾರು ಚಾಲನೆ: ಅಪರಾಧಿಗಳಿಗೆ ₹69,000 ದಂಡ

ವರದಿ: ಪ್ರಭು ವಿ ಎಸ್

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯಪಾನ ಮಾಡಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ವರದಪುರ ಮೂಲದ ಧನಂಜಯ ಹಾಗೂ ಸ್ನೇಹಿತರಿಗೆ ಮದ್ದೂರು ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯವು ಬರೋಬ್ಬರಿ 69 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಫು ನೀಡಿದೆ.

ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಕಳೆದ ಒಂದು ವಾರದ ಹಿಂದೆ ಸಂಜೆ ಸಂಚಾರಿ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದ್ದ ವೇಳೆ ಮೈಸೂರಿನಿಂದ ಬೆಂಗಳೂರು ಕಡೆಗೆ KA-53-MH-2566 ವಾಹನ ಸಂಖ್ಯೆಯ ಮಾರುತಿ ಎರ್ಟಿಗಾ ಕಾರನ್ನು ಚಾಲಕ ಪಾನಮತ್ತನಾಗಿ ಅತೀ ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿದ್ದ. ಇದರಿಂದ ಇತರೆ ವಾಹನ ಚಾಲಕರಿಗೆ ಆತಂಕ ಉಂಟಾಗಿತ್ತು. ಇದನ್ನು ಗಮನಿಸಿದ ಸಂಚಾರಿ ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಿದಾಗಿ, ಚಾಲಕ ಧನಂಜಯ ಸೇರಿದಂತೆ  ಕಾರಿನಲ್ಲಿದ್ದ ಇತರೆ ಐದು ಮಂದಿಯೂ ಸಹ ಪಾನಮತ್ತರಾಗಿರುವುದ ತಪಾಸಣೆಯಿಂದ ಕಂಡು ಬಂದಿತ್ತು. ತಪಾಸಣೆ ಸಂದರ್ಭದಲ್ಲಿ ಅಪರಾಧಿಗಳು ಸಂಚಾರಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಮದ್ದೂರು ಸಂಚಾರಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು, ಚಾಲಕ ಹಾಗೂ ಆತನ ಸಂಗಡಿಗರ ವಿರುದ್ಧ ಸೆಕ್ಷನ್ 185, 184, 188, 179(1) (2), 177 ಮೊಕದ್ದಮೆ ದಾಖಲು ಮಾಡಿಕೊಂಡು ಮದ್ದೂರು ಪಟ್ಟಣದ ಜೆಎಂಎಫ್’ಸಿ ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಿದ್ದರು. ಇಂದು ಗುರುವಾರ ಬೆಳಿಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಿಯಾಂಕಾ ಅವರು ಕಾರು ಚಾಲಕ ಧನಂಜಯ ಹಾಗೂ ಸಂಗಡಿಗರಿಗೆ 69 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!