Tuesday, April 30, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಬೆಂಬಲಿಸಿ: ಹೆಚ್.ಡಿ.ದೇವೇಗೌಡ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗಿಂತ ಮೋದಿಯವರು ಗ್ಯಾರಂಟಿ ನಂಬಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರಿಗೆ ಮತ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಕರ್ನಾಟಕದ ನೀರಾವರಿ ಮಂತ್ರಿ ಇದ್ದಾರೆ ಅವ್ರು ಬಹಳ ತಜ್ಞರು. ನೀರಾವರಿ ಜೊತೆಗೆ ಬಿಡಿಎ, ವಾಟರ್ ಬೋರ್ಡ್, ಕಾರ್ಪೋರೇಷನ್ ಇಲಾಖೆ ನಿರ್ವಹಿಸ್ತಿದ್ದಾರೆ.ಅವ್ರು ಕೈಯಲ್ಲಿ ತಗೋಳಲ್ಲ ಬಾಚಿಕೊಳ್ತಿದ್ದಾರೆ. ಬಾಚಿ ಬಾಚಿ ರಾಜಸ್ಥಾನ, ಛತ್ತಿಸ್‌ಘಡಕ್ಕೆ ಕಳುಹಿಸುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.

ಬರಿ ಜಾತಿಯಲ್ಲ

ಗೌಡ ಅನ್ನೋದು ಬರಿ ಜಾತಿಯಲ್ಲ. ಬೆವರು ಸುರಿಸಿ ದೇಶಕ್ಕೆ ಅನ್ನ ಕೊಡುವ ರೈತ. ಪಂಜಾಬಿನಲ್ಲಿ ಈ ಗೌಡನ ಹೆಸ್ರನ್ನ ಒಂದು ತಳಿ ಅಕ್ಕಿಗೆ ಇಟ್ಟಿದ್ದಾರೆ. ಗ್ಯಾರಂಟಿ ನಂಬಿ ಮತ್ತೆ ಮೋಸ ಹೋಗ್ಬೇಡಿ. ಮೋದಿಯವ್ರು ಅನೇಕ ಗ್ಯಾರಂಟಿ ಕೊಟ್ಟಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಈಗ ನೀರಿಗಾಗಿ ಕಿತ್ತಾಡುತ್ತಿದ್ದಾರೆ. ನಾನು ಸಾಕಷ್ಟು ಯೋಜನೆಗಳನ್ನ ಕೊಟ್ಟಿದ್ದೇನೆ ಆದ್ರೆ ಈ ರಾಜ್ಯದಲ್ಲಿ ನನ್ನ ಹೆಸರಿಲ್ಲ. ಕುಮಾರಸ್ವಾಮಿ ಸೇರಿದಂತೆ ಕಾವೇರಿ ಜಲಾನಯನ ವ್ಯಾಪ್ತಿಯ ಅಭ್ಯರ್ಥಿಗಳು ಗೆಲ್ಲಲೇಬೇಕು ಎಂದರು.

ಗೌರವಾನ್ವಿತ ಸಿಎಂ, ಡಿಸಿಎಂ. 95 ಜನರನ್ನ ಚೇರ್ಮನ್ ಮಾಡಿ ಅವ್ರಿಗೆ ಮಂತ್ರಿ ಸ್ಥಾನಮಾನ ಕೊಟ್ಟಿದ್ದಾರೆ.
ಅಭಿವೃದ್ಧಿಗೆ ಕಾಸಿಲ್ಲ, ನೀರಾವರಿಗೆ ಕಾಸಿಲ್ಲ. ಮೋದಿ ಮನಸ್ಸು ಮಾಡಿದ್ರೆ ಮೇಕೆದಾಟು ಮಾಡಬಹುದು. ಅದನ್ನು ಕೇಳೋಕೆ ಸ್ಟಾಲಿನ್ ಹಂಗು ಬಿಡಲ್ಲ‌. ಮತ್ತೊಮ್ಮೆ ನರೇಂದ್ರ ಮೋದಿಗೆ ದೇಶವನ್ನು ಆಳುವ ಶಕ್ತಿ ಚಾಮುಂಡೇಶ್ವರಿ ತಾಯಿ ಕೊಡಲಿ ಎಂದರು.

ಸರಿಸಾಟಿ ಅಲ್ಲ

ನಾನು ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಹೋಗಿಲ್ಲ. ಯಾರೋ ಮಂತ್ರಿ ಆಗಿರೋರ ಬಗ್ಗೆ ಮಾತನಾಡೋದು ಬೇಡ, ನಿನ್ನ ವ್ಯಕ್ತಿತ್ವಕ್ಕೆ ಅವ್ರು ಎಂದು ಸಾಟಿ ಅಲ್ಲಾ ಎಂದು ಹೆಸರೇಳದೆ ಪರೋಕ್ಷವಾಗಿ ಚಲುವರಾಯಸ್ವಾಮಿ ಪುಟ್ಟರಾಜುಗೆ ಸರಿಸಾಟಿ ಅಲ್ಲ ಎಂದರು.

ನಾನು ಎಷ್ಟು ವರ್ಷ ಬದುಕಿರ್ತಿನೋ ಗೊತ್ತಿಲ್ಲ. ಮೂರು ವರ್ಷದಿಂದ ಕಠಿಣ ಖಾಯಿಲೆಯಿಂದ ಬಳಲುತ್ತಿದ್ದೇನೆ. ನನಗೆ ಕಿಡ್ನಿ ಫೈಲ್ ಆಗಿದೆ, ಶುಗರ್ ಇದೆ, ಆದ್ರೆ ಇನ್ನು ಬದುಕಿದ್ದೇನೆ. 4 ತಿಂಗಳಿಂದೀಚೆಗೆ ಬದುಕಿಗಾಗಿ ಹೋರಾಟ ಮಾಡ್ತಿದ್ದೀನಿ. ಒಕ್ಕಲಿಗ ನಾಯಕ ಹೋರಾಟದ ವಿಚಾರದ ಬಗ್ಗೆ ಚುನಾವಣೆ ನಂತರ ಮಾತಾಡ್ತತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಚಲುವರಾಯಸ್ವಾಮಿಗೆ ಸವಾಲು ಹಾಕಿದರು.

ಚಲುವರಾಯಸ್ವಾಮಿ ಕುಮಾರಸ್ವಾಮಿನ ಸಿಎಂ ಮಾಡೋಕೆ ಏನೆಲ್ಲ ಡ್ರಾಮ ಪ್ಲೇ ಮಾಡಿದ್ರು ಅನ್ನೋದನ್ನ ಅವನ ಲೆವೆಲ್ಗೆ ಇಳಿದು ಮಾತನಾಡಲ್ಲ. ಚಲುವರಾಯಸ್ವಾಮಿ ಬಂಡವಾಳ ಏನು ಅನ್ನೋದನ್ನ ನಾನು ಮಾತನಾಡಲ್ಲ. ಅವ್ರ ಬಂಡವಾಳ ಬೇರೆಯವ್ರು ಮಾತನಾಡ್ತಾರೆ ಎಂದು ತಿರುಗೇಟು ನೀಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!