Saturday, May 4, 2024

ಪ್ರಾಯೋಗಿಕ ಆವೃತ್ತಿ

ನಾಲ್ಕು ತಿಂಗಳಲ್ಲಿ ಮೇಕೆದಾಟು ಯೋಜನೆ ಅನುಷ್ಟಾನ: ಹೆಚ್.ಡಿ.ಕುಮಾರಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ನಿಮ್ಮ ಮನೆಯ ಮಗನೆಂದು ಗೆಲ್ಲಿಸಿದರೆ, ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ಮೇಕೆದಾಟು ಆಣೆಕಟ್ಟು ಯೋಜನೆ ಅನುಷ್ಟಾನಗೊಳಿಸಿ, ಕೊಬ್ಬರಿಗೆ ಬೆಂಬಲ ಬೆಲೆಯನ್ನ ದೊರಕಿಸಿ ಕೊಡುತ್ತೇನೆ ಎಂದು ಮಂಡ್ಯ ಲೋಕಸಭೆಯ ಮೈತ್ರಿ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ನಾಗಮಂಗಲದ ಪಟ್ಟಣದ ಹಿರಿಕೆರೆ ಮೈದಾನದಲ್ಲಿ ಸೋಮವಾರ ನಡೆದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಾರ್ಯಕರ್ತರ ಸಮಾವೇಶದಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಮಂಡ್ಯ ಲೋಕಸಭಾ ಅಭ್ಯರ್ಥಿ ಯಾಗುವ ಉದ್ದೇಶ ನನಗೆ ಇರಲಿಲ್ಲ. ಬೇರೆ ಕ್ಷೇತ್ರಗಳಲ್ಲಿ ಅವಕಾಶಗಳು ಇದ್ದವು, ಮಂಡ್ಯದಲ್ಲಿ ಲೋಕಸಭಾ ಅಭ್ಯರ್ಥಿಗಳನ್ನಾಗಿ ಸುರೇಶ್ ಗೌಡ, ಪುಟ್ಟರಾಜು ಅವರಿಗೆ ಚುನಾವಣಾ ತಯಾರಿಕೆ ಮಾಡಿಕೊಂಡಿರುವಂತೆ ಸೂಚನೆ ನೀಡಿದ್ದೆ. ಆದರೇ ಕಾರ್ಯಕರ್ತರ ಹಾಗೂ ಪಕ್ಷದ ಮುಖಂಡರ ನಿರ್ಣಾಯದ ಅಧಾರದ ಮೇಲೆ ನಿಖಿಲ್ ನಿಲ್ಲಿಸಲು ಮುಂದಾದೆವು. ಆದರೆ ನಿಖಿಲ್, ಕಳೆದ ಚುನಾವಣೆಗಳಲ್ಲಿ ಸೋತಿದ್ದೇನೆ, ಜಿಲ್ಲೆಯ ಜನರ ಸಂಪರ್ಕದಲ್ಲಿ ಇಲ್ಲದಿರುವ ಕಾರಣ ನನಗೆ ಈ ಬಾರಿಯ ಚುನಾವಣೆ ಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿತಿಳಿಸಿದರು. ಅದಾದ ನಂತರ ಪಕ್ಷದ ವರಿಷ್ಠರೆಲ್ಲರೂ ತೀರ್ಮಾನದಂತೆ ನನ್ನನ್ನ ಲೋಕಸಭಾ ಅಭ್ಯರ್ಥಿ ಯನ್ನಾಗಿ ಮಾಡಿದ್ದಾರೆ ಎಂದು ವಿವರಿಸಿದರು.

ಪೂರ್ವದಲ್ಲಿ ಆಗಿರುವ ವಿಚಾರದ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಮಂಡ್ಯಕ್ಕೆ ದೇವೆಗೌಡರ ಕೊಡುಗೆ ಏನಿಲ್ಲ ಎಂದು ಹೇಳುವ ಅವರಿಗೆ ಉತ್ತರಿಸಿದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಅಭಿವೃದ್ಧಿ ಆಗಿದೆ. ಅದನ್ನ ಬಿಟ್ಟರೆ ಏನು ಕೂಡ ಅಭಿವೃದ್ಧಿ ಆಗಿಲ್ಲ. ರೈತರ ವಿಚಾರದಲ್ಲಿ ಜಿಲ್ಲೆಯಲ್ಲಿ ಜನರಿಗೆ ನೇರವಾಗಿ ಸ್ಪಂದಿಸರುವವನು ನಾನೆ ಹೊರತು ಚಲುವರಾಯಸ್ವಾಮಿ ಅಲ್ಲ. ಅವರು ಒಬ್ಬನೇ ಒಬ್ಬ ರೈತರ ಮನೆಗೆ ಅಧಿಕಾರದ ಅವಧಿಯಲ್ಲಿ ಭೇಟಿ ಕೊಟ್ಟು ಸಹಾಯ ಮಾಡಿಲ್ಲ ಎಂದರು.

ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಲೋಕಸಭಾ ಚುನಾವಣೆಯ ಬಗ್ಗೆ ಕಾಂಗ್ರೆಸ್ ನವರು ಹಲವಾರು ಸುಳ್ಳುಗಳನ್ನ ಹೇಳುತ್ತಾ ಜೆಡಿಎಸ್ ಪಕ್ಷ ನಿರ್ನಾಮಕ್ಕೆ ಜಿಲ್ಲಾ ಮಂತ್ರಿಗಳ ಜೊತೆಗೆ ಸೇರಿ ಸಂಚು ರೂಪಿಸುತ್ತಿದ್ದಾರೆ, ಆದರೇ ಜೆಡಿಎಸ್ ಪಕ್ಷದ ಶಕ್ತಿಯೇ ಜನರು ಎಂಬುದು ಅವರಿಗೆ ಗೊತ್ತಿಲ್ಲ, ಜೆಡಿಎಸ್ ಪಕ್ಷಕ್ಕೆ ಜನರ ಆಶೀರ್ವಾದವಿದ್ದು ಪಕ್ಷವನ್ನು ನಿರ್ನಾಮ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದರು.

ಮಾಜಿ ಸಂಸದ ಪ್ರತಾಪಸಿಂಹ ಮಾತನಾಡಿ, ಮೂರನೇ ಬಾರಿಗೆ ದೇಶ ಕಾಯುವ ನಾಯಕನಾಗಿ ಪ್ರಧಾನ ಮಂತ್ರಿಯಾಗಿ ಮೋದಿಜಿ ಅಧಿಕಾರಕ್ಕೆ ಬರಲಿದ್ಧಾರೆ. ಅದೇ ರೀತಿ ಮಂಡ್ಯ ಕಾವೇರಿ ರಕ್ಷಣೆಗೆ ಕುಮಾರ ಸ್ವಾಮಿಯವರ ಅವಶ್ಯಕತೆ ಇದೆ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಡಾ ರವೀಂದ್ರ, ಪೈಟರ್ ರವಿ, ವಿವೇಕ್, ನಾರಾಯಣ ಮೂರ್ತಿ, ನೆಲ್ಲಿಗೆರೆ ಬಾಲು, ಶ್ರೀನಿವಾಸ್, ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!