Monday, April 29, 2024

ಪ್ರಾಯೋಗಿಕ ಆವೃತ್ತಿ

ಐಟಿ ಇಲಾಖೆಯು ಬಿಜೆಪಿಗೆ 4,600 ಕೋಟಿ ರೂ.ಗಳ ಬೇಡಿಕೆ ಇಡಬೇಕು: ಕಾಂಗ್ರೆಸ್ ಆಗ್ರಹ

₹1,823.08 ಕೋಟಿ ದಂಡ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್‌ಗೆ ಹೊಸ ನೋಟಿಸ್‌ಗಳನ್ನು ನೀಡಿದ್ದು, ‘ಬಿಜೆಪಿ ಗಮನಾರ್ಹ ಉಲ್ಲಂಘನೆಗಳನ್ನು ಮಾಡಿದೆ’ ಎಂದು ಎಐಸಿಸಿ ಖಜಾಂಚಿ ಅಜಯ್ ಮಾಕನ್ ಅವರು ಐಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಕಾಂಗ್ರೆಸ್ ಪಕ್ಷವು ಆದಾಯ ತೆರಿಗೆ ಅಧಿಕಾರಿಗಳಿಂದ ಅನ್ಯಾಯವಾಗಿ ಗುರಿಯಾಗಿದೆ’ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರೊಂದಿಗೆ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಕೆನ್, “ಬಿಜೆಪಿಯ ಎಲ್ಲ ಉಲ್ಲಂಘನೆಗಳನ್ನು ನಾವು ನಮ್ಮ ಪಕ್ಷಕ್ಕೆ ನೋಟಿಸ್ ನೀಡಿದ ಅದೇ ನಿಯತಾಂಕಗಳನ್ನು ಬಳಸಿಕೊಂಡು ವಿಶ್ಲೇಷಣೆ ಮಾಡಿದ್ದೇವೆ” ಎಂದು ಹೇಳಿದರು.

“ಭಾರತೀಯ ಜನತಾ ಪಕ್ಷವು ಆದಾಯ ತೆರಿಗೆ ಕಾನೂನುಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ. ಕೇಂದ್ರದ ಆಡಳಿತ ಪಕ್ಷದಿಂದ ₹4,600 ಕೋಟಿಗೂ ಹೆಚ್ಚು ಬೇಡಿಕೆ ಇಡಬೇಕು” ಎಂದು  ಅವರು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಆಗ್ರಹ ಮಾಡಿದರು.

“ನಮ್ಮ ಉಲ್ಲಂಘನೆಗಳನ್ನು ವಿಶ್ಲೇಷಿಸಲು ಅವರು ಬಳಸಿದ ಅದೇ ನಿಯತಾಂಕಗಳನ್ನು ಬಳಸಿಕೊಂಡು ನಾವು ಬಿಜೆಪಿಯ ಎಲ್ಲಾ ಉಲ್ಲಂಘನೆಗಳನ್ನು ವಿಶ್ಲೇಷಿಸಿದ್ದೇವೆ. ಬಿಜೆಪಿಗೆ ₹4600 ಕೋಟಿ ದಂಡವಿದೆ; ಆದಾಯ ತೆರಿಗೆ ಇಲಾಖೆಯು ಈ ಮೊತ್ತವನ್ನು ಪಾವತಿಸಲು ಬಿಜೆಪಿಯ ಮುಂದೆ ಬೇಡಿಕೆ ಇಡಬೇಕು” ಎಂದು ಮಾಕೆನ್ ಹೇಳಿದರು.

“ಕಾಂಗ್ರೆಸ್ ಮತ್ತು ಇತರ ಸಮಾನ ಮನಸ್ಕ ಆಯ್ದ ವಿರೋಧ ಪಕ್ಷಗಳು ಐಟಿ ಇಲಾಖೆಯಿಂದ ಗುರಿಯಾಗುತ್ತಿವೆ.  ಈ ಇಲಾಖೆಯು ಬಿಜೆಪಿಯ ಮುಂಚೂಣಿ ಸಂಸ್ಥೆ” ಎಂದು ಮಾಕೆನ್ ವಾಗ್ದಾಳಿ ನಡೆಸಿದರು.

“ಐಟಿ ಇಲಾಖೆಯ ಬೇಡಿಕೆಗಳ ಕುರಿತು ಕಾಂಗ್ರೆಸ್ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ ಮೊರೆ ಹೋಗಲಿದೆ” ಎಂದು ಹೇಳಿದ್ದಾರೆ.

ಬಿಜೆಪಿ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ

‘ಚುನಾವಣಾ ಬಾಂಡ್‌ ಹಗರಣದ ಮೂಲಕ ಬಿಜೆಪಿ ₹8,200 ಕೋಟಿ ಸಂಗ್ರಹಿಸಿದೆ; ಪ್ರೀ ಪೇಯ್ಡ್‌, ಪೋಸ್ಟ್‌ ಪೇಯ್ಡ್‌, ಪೋಸ್ಟ್‌ ರೈಡ್‌ ಲಂಚ ಮತ್ತು ಶೆಲ್‌ ಕಂಪನಿಗಳ ಮಾರ್ಗವನ್ನು ಬಳಸಿಕೊಂಡಿದೆ” ಎಂದು ಸಂವಹನ ಉಸ್ತುವಾರಿ ಜೈರಾಮ್ ರಮೇಶ್‌ ಆರೋಪಿಸಿದ್ದಾರೆ. ‘ಮತ್ತೊಂದೆಡೆ ಬಿಜೆಪಿ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ” ಎಂದು ಆರೋಪಿಸಿದರು.

ಕಾಂಗ್ರೆಸ್ ಅನ್ನು ಆರ್ಥಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ನಾವು ಕುಗ್ಗುವುದಿಲ್ಲ ಎಂದು ರಮೇಶ್ ಹೇಳಿದರು.

ನಾಲ್ಕು ವರ್ಷಗಳ ಅವಧಿಗೆ ತನ್ನ ವಿರುದ್ಧ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಮನವಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ನಂತರ ಕಾಂಗ್ರೆಸ್ ಪಕ್ಷವು ಆದಾಯ ತೆರಿಗೆ ಇಲಾಖೆಯಿಂದ ಹೊಸ ನೋಟಿಸ್‌ಗಳನ್ನು ಸ್ವೀಕರಿಸಿದೆ. ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೇಂದ್ರ ಕುಮಾರ್ ಕೌರವ್ ಅವರ ಪೀಠವು ಮತ್ತೊಂದು ಅವಧಿಗೆ ಮರುಮೌಲ್ಯಮಾಪನವನ್ನು ತೆರೆಯಲು ಮಧ್ಯಪ್ರವೇಶಿಸಲು ನಿರಾಕರಿಸಿದ ಹಿಂದಿನ ನಿರ್ಧಾರದ ಪ್ರಕಾರ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!