Sunday, May 5, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಶೂನ್ಯ: ಮಧು ಮಾದೇಗೌಡ

ಮಂಡ್ಯ ಲೋಕಸಭೆಯ  ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಮಂಡ್ಯ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಹರಿಹಾಯ್ದರು.

ಮದ್ದೂರು ಸಮೀಪದ ಕಾಡುಕೊತ್ತನಹಳ್ಳಿ, ಕಪರೆಕೊಪ್ಪಲು, ಭುಜವಳ್ಳಿ, ತೊರೆಬೊಮ್ಮನಹಳ್ಳಿ, ಮುಡೀನಹಳ್ಳಿ, ಮಡೇನಹಳ್ಳಿ, ಮೆಣಸಗೆರೆ, ಹೊನ್ನಾಯಕನಹಳ್ಳಿ, ಬೊಪ್ಪಸಮುದ್ರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರ ಮತಯಾಚಿಸಿ ಮಾತನಾಡಿದರು.

ಈ ಹಿಂದೆ ರೈತರ ಸಾಲ ಮನ್ನಾ ಮಾಡುತ್ತೆನೆ ಎಂದು ಅಧಿಕಾರದ ಗದ್ದುಗೆ ಹೇರಿದ ಎಚ್.ಡಿ.ಕುಮಾರಸ್ವಾಮಿ ರೈತರ ಪೂರ್ಣ ಪ್ರಮಾಣದ ಸಾಲ ಮನ್ನಾ ಮಾಡದೇ ರೈತ ಸಮುದಾಯಕ್ಕೆ ನಿರಾಸೆ ಉಂಟು ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದ್ದು ವಿಧಾನ ಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಪೂರ್ಣಗೊಳಿಸಿ ಜನಪರ ಸರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಿಕ್ಕೆ ಬಂದರೆ ನಾರಿ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವುದರ ಜತೆಗೆ ರೈತರ ೩ ಲಕ್ಷ ಕೋಟಿ ಸಾಲ ಮನ್ನಾ ಮಾಡಲುಗುತ್ತದೆ ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸುವ ಮೂಲಕ ರೈತಪರ ಸರಕಾರ ಬರಲು ಸಹಕಾರ ನೀಡುವಂತೆ ಕೋರಿದರು.

ಸರಳ ವ್ಯಕ್ತಿತ್ವ ಹೊಂದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಮಂಡ್ಯ ಜಿಲ್ಲೆ ಮಗನಾಗಿದ್ದು ಜಿಲ್ಲೆಯ ಅಭಿವೃದ್ಧಿಗೆ ತನ್ನದೆ ಆದ ಕಾರ್ಯಯೋಜನೆ ರೂಪಿಸಿ ಕೊಂಡಿದ್ದಾರೆ. ಈಲ್ಲೆ ಪ್ರಗತಿಗೆ ಮತ್ತು ಕಾಂಗ್ರೆಸ್ ಸರಕಾರದ ಜನಪರ ಆಡಳಿತಕ್ಕೆ ಸ್ಟಾರ್ ಚಂದ್ರು ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುವ ಮೂಲಕ ಜಿಲ್ಲೆಯ ಗೌರವ ಉಳಿಸುವಂತೆ ಮನವಿ ಮಾಡಿದರು.

ನನ್ನ ತಂದೆ ಜಿ.ಮಾದೇಗೌಡ ಅವರು ತಮ್ಮ ಜೀವತವಧಿ ವರೆಗೂ ರೈತರಿಗಾಗಿ ಹೋರಾಟ ಮಾಡುತ್ತಲೇ ಜೀವ ಸವೆಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ್ದು ಅವರ ಅಭಿಮಾನಿಗಳು ಸಹ ಕಾಂಗ್ರೆಸ್ ಬೆಂಬಲಿಸುವ ಮೂಲಕ ಜಿಲ್ಲೆಯ ಘನತೆಯನ್ನು ದೇಶದ ಗಮನ ಸೆಳೆಯುಂತೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಬೆಂಬಲಿಸುವಂತೆ ಕೋರಿದರು.

ತಾ.ಪಂ. ಮಾಜಿ ಸದಸ್ಯರಾದ ಬಿ.ಗಿರೀಶ್, ಭರತೇಶ್, ಮುಖಂಡರಾದ ಆರ್. ಸಿದ್ದಪ್ಪ, ಮಣಿಗೆರೆ ಕೆ.ಕಬ್ಬಾಳಯ್ಯ, ವಿನಯ್ ಹೊನ್ನೇಗೌಡ, ಹಾಗಲಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಮತ್ತಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!