Sunday, May 19, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಮೋದಿ ಮಾತನಾಡಲಿ: SDPI ಆಗ್ರಹ

ಎನ್ ಡಿ ಎ ಮೈತ್ರಿಕೂಟದ ಮೈತ್ರಿ ಅಭ್ಯರ್ಥಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚದೆ ಮೌನವಹಿಸಿರುವುದು ಮಹಿಳಾ ವಿರೋಧಿ ನಡೆಯಾಗಿದ್ದು, ಅವರು ಈ ಕುರಿತು ಮಾತನಾಡಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI ) ಮಂಡ್ಯ ನಗರದಲ್ಲಿ  ಪ್ರತಿಭಟನೆ ನಡೆಸಿತು.

ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಎಸ್’ಡಿಪಿಐ ಕಾರ್ಯಕರ್ತರು, ದೇಶದ ಬಹುದೊಡ್ಡ ಲೈಂಗಿಕ ಹಗರಣದ ಬಗ್ಗೆ ತುಟಿ ಬಿಚ್ಚದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ನಾಯಕರು ಮಾತನಾಡಬೇಕು ಎಂದು ಒತ್ತಾಯಿಸಿದರು.

ನರೇಂದ್ರ ಮೋದಿ ಅವರ ಪರಮಾಪ್ತ ಪಕ್ಷವಾಗಿರುವ ಜಾತ್ಯಾತೀತ ಜನತಾದಳದ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿ ನೀಚ ಕೃತ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದು ಈ ಬಗ್ಗೆ ನೊಂದ ಮಹಿಳೆಯರು ದೂರು ನೀಡಿದ್ದಾರೆ. ಭಾರತ ದೇಶದಲ್ಲಿ ನಡೆದಿರುವ ಅತಿ ದೊಡ್ಡ ಲೈಂಗಿಕ ಹಗರಣ ಇದಾಗಿದ್ದು, ಇದರಲ್ಲಿ ಭಾಗಿಯಾಗಿದ್ದ ಎಚ್ ಡಿ ರೇವಣ್ಣ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಇಷ್ಟೆಲ್ಲ ನಡೆದಿದ್ದರೂ, ಬಿಜೆಪಿ ಪಕ್ಷದ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ನಾಯಕರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಕಿಡಿಕಾರಿದರು.

ಕೋಮು ದ್ವೇಷ ಹರಡುವ ಉದ್ದೇಶದಿಂದ ಹುಬ್ಬಳ್ಳಿಯ ನೇಹಾ ಪ್ರೇಮ ವೈಪಲ್ಯ ಕೊಲೆ ಪ್ರಕರಣವನ್ನು ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸಕ್ಕೆ ಮುಂದಾದವರು ಬಿಜೆಪಿ ನಾಯಕರು, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕುರಿತು ಒಂದೇ ಒಂದು ಹೋರಾಟ ಮಾಡುತ್ತಿಲ್ಲ ಏಕೆ ? ಹಗರಣದಲ್ಲಿ ಪ್ರಕರಣದಲ್ಲಿ ನೊಂದಿರುವ ಸಾವಿರಾರು ಮಹಿಳೆಯರು ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದರು.

ಆರೋಪಿ ಮುಸ್ಲಿಂ ಆಗಿದ್ದರೆ ಮಾತ್ರ ಆಕ್ರೋಶವೆ…? ಪಶ್ಚಿಮ ಬಂಗಾಳದ ಸಂದೇಶ್ ವಾಲಿ ಪ್ರಕರಣದಲ್ಲಿ ಆರೋಪಿ ಮುಸ್ಲಿಂ ಆಗಿದ್ದ ಕಾರಣಕ್ಕೆ ಮೋದಿ ಸಂತ್ರಸ್ತ ಮಹಿಳೆಯರನ್ನು ಖುದ್ದು ಭೇಟಿ ಮಾಡಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ತುರ್ತಾಗಿ ಕ್ರಮ ಕೈಗೊಂಡಿತ್ತು. ಆದರೆ ಪ್ರಜ್ವಲ್ ರೇಬಣ್ಣ ಪ್ರಕರಣದಲ್ಲಿ ಇದ್ದಾವುದೂ ಇಲ್ಲ. ರಾಷ್ಟ್ರೀಯ ಮಹಿಳಾ ಆಯೋಗದಿಂದ ನೋಟಿಸ್ ಸಹ ಜಾರಿಯಾಗಿಲ್ಲ. ಇದು ಎಂತಹ ಭೇದಭಾವ ಮನಸ್ಥಿತಿ,ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ನೀಚ ಕೃತ್ಯವನ್ನು ಖಂಡಿಸದ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಮಾಯಕ ಮುಗ್ಧ ಮಹಿಳೆಯರ ಮೇಲೆ ಅಧಿಕಾರ ದುರ್ಬಳಕೆ ಮಾಡಿಕೊಂಡು ದೌರ್ಜನ್ಯ ಎಸಗಿರುವ ಸಂಸದ ಪ್ರಜ್ವಲ್ ರೇವಣ್ಣ ಹೀನ ಕೃತ್ಯ ಅಮಾನವೀಯ, ವಿಕೃತಕಾಮಿ ಮನಸ್ಥಿತಿಯನ್ನು ಪ್ರದರ್ಶಿಸುವ ಕೃತ್ಯವಾಗಿದೆ, ಇಂತಹ ನೀಚ ಮನಸ್ಥಿತಿಯ ವ್ಯಕ್ತಿ ರಾಜಕಾರಣದಲ್ಲಿ ಮಾತ್ರವಲ್ಲ, ಸಮಾಜದಲ್ಲಿ ಇರಲು ಸಹ ನಾಲಾಯಕ್ ಆಗಿದ್ದು, ಇಂತಹ ವ್ಯಕ್ತಿಯನ್ನು ದೇಶ ತೊರೆಯಲು ಸಹಕರಿಸಿದವರು ಯಾರು ಎಂಬ ಬಗ್ಗೆ ತನಿಖೆಯಾಗಬೇಕು, ಪ್ರಜ್ವಲ್ ಹಾಗೂ ಎಚ್ ಡಿ ರೇವಣ್ಣ ಪ್ರಭಾವಿಗಳಾಗಿರುವುದರಿಂದ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು, ರಾಜಕೀಯ ಪ್ರಾಬಲ್ಯ ಬಳಸಿಕೊಂಡು ಸಾಕ್ಷಿಗಳ ಮೇಲೆ ಒತ್ತಡ ಹೇರುವ ಮೂಲಕ ಪ್ರಕರಣ ಮುಚ್ಚಿಹಾಕುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆಳುವ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಆದಷ್ಟು ಶೀಘ್ರವಾಗಿ ತನಿಖೆಯನ್ನು ಪೂರ್ಣಗೊಳಿಸಿ ನೀಚ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಸ್ ಡಿ ಪಿ ಐ ಮಂಡ್ಯ ಜಿಲ್ಲಾಧ್ಯಕ್ಷ ಸಾದತ್ ಆಲಿ, ಮುಖಂಡರಾದ ಮುಕ್ತಾರ್ ಅಹಮದ್, ಮೋಹರ್, ನೂರುಲ್ಲಾ ಶರೀಫ್, ಸಿದ್ದರಾಜು, ನಿಖಿದ್ ಬಾನು ಮತ್ತಿತರರು ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!