Saturday, May 18, 2024

ಪ್ರಾಯೋಗಿಕ ಆವೃತ್ತಿ

ನಾಡು-ನುಡಿಗೆ ಡಾ.ರಾಜ್ ಕುಮಾರ್ ಕೊಡುಗೆ ಅವಿಸ್ಮರಣೀಯ

ಕನ್ನಡ ನಾಡು-ನುಡಿ ಬೆಳೆಸುವಲ್ಲಿ ಡಾ.ರಾಜ್‌ಕುಮಾರ್ ಅವರ ಕೊಡುಗೆ ಅವಿಸ್ಮರಣೀಯ ಎಂದು ನಾಲ್ವಡಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ಧನಂಜಯ ದರಸಗುಪ್ಪೆ ಹೇಳಿದರು.

ಮಂಡ್ಯ ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಅಂತರಾಷ್ಟೀಯ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಜಯಂತಿ ಪ್ರಯುಕ್ತ ಗರ್ಭಿಣಿಯರು, ಬಾಣಂತಿಯರು, ನಿರ್ಗತಿಕರಿಗೆ ಪೌಷ್ಠಿಕಾಹಾರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವ ಕಂಡ ಅಪ್ರತಿಮ ಮೇರು ನಟ ಡಾ. ರಾಜಕುಮಾರ್ ಅವರು ರಂಗಭೂಮಿಯ ಹಿನ್ನೆಲೆಯುಳ್ಳವರು. ಅವರ ಸ್ಪಷ್ಟವಾದ ಕನ್ನಡದ ಬಳಕೆಯಿಂದ ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತಿದ್ದರು. ಗೋಕಾಕ್ ಚಳುವಳಿ ಯಶಸ್ವಿಯಾಗಲು ಅಣ್ಣಾವ್ರ ಭಾಗವಹಿಸುವಿಕೆಯೂ ಪ್ರಮುಖ ಕಾರಣವಾಯಿತು. ಕನ್ನಡ ನಾಡು ಕಟ್ಟುವ ಕಾರ್ಯದಲ್ಲಿ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ಹೀಗೆ ಯಾವುದೇ ಪ್ರಕಾರದ ಪಾತ್ರಗಳಿರಲಿ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ರಾಜಕುಮಾರ್ ಅವರ ಚಿತ್ರಗಳು ಸಂಸಾರ ಸಮೇತ ಕುಳಿತು ನೋಡಬಹುದಾದ ಚಿತ್ರಗಳಾಗಿದ್ದು, ಅವುಗಳ ಮೂಲಕ ಸಮಾಜಕ್ಕೆ ನೀತಿ ಮತ್ತು ಸಂದೇಶವನ್ನು ನೀಡುತ್ತಿದ್ದರು ಎಂದರು.

ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಸರ್ಕಾರದಿಂದ “ಕರ್ನಾಟಕ ರತ್ನ” ಹಾಗೂ ಜೀವಮಾನ ಸಾಧನೆಗಾಗಿ “ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ” ದೊರಕಿರುವುದು ಅಣ್ಣಾವ್ರ ಕಲಾ ಸೇವೆಗೆ ಸಂದ ಗೌರವವಾಗಿದೆ. ” ಅವರ ಎಲ್ಲ ಯಶಸ್ವಿನ ಹಿಂದೆ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಸಹಕಾರ ಮರೆಯುವಂತಿಲ್ಲ.

ಅವರ ಇಡೀ ಕುಟುಂಬ ಚಿತ್ರರಂಗದಲ್ಲಿ ತೊಡಗಿರುವುದು ವಿಶೇಷ ಎಂದರು.

ಮಹಾಡ್ರೀಮ್ಸ್ ನಾಲ್ವಡಿ ತಂಡವು ಸಂಘಟನಾತ್ಮಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಸಮಾಜಮುಖಿಯಾಗಿಯೂ ಸೇವೆ ಸಲ್ಲಿಸುತ್ತಿದೆ, ಆರ್ಥಿಕ ಸಬಲೀಕರಣಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಾಡ್ರೀಮ್ ನಾಲ್ವಡಿ ತಂಡದ ಮುಖ್ಯಸ್ಥರಾದ ನಂಜುಂಡಸ್ವಾಮಿ, ಲಯನ್ಸ್ ಸಂಸ್ಥೆಯ ಎ.ಡಿ.ಸಿ.ಎಸ್ ಲ.ಹನುಮಂತಯ್ಯ ಲ. ವಿ. ಸಿ.ಗೋವರ್ಧನ ರೆಡ್ಡಿ, ಲ. ಲಿಂಗೇಗೌಡ, ಮಹಾ ಡ್ರೀಮ್ಸ್ ನಾಲ್ವಡಿ ತಂಡದ ಚೆಲುವರಾಜು, ಶಿವಣ್ಣ ನವೀನ ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!