Sunday, May 5, 2024

ಪ್ರಾಯೋಗಿಕ ಆವೃತ್ತಿ

ಹಾಸನದಲ್ಲಿ ಲೈಂಗಿಕ ಕಿರುಕುಳದ ಪೆನ್ ಡ್ರೈವ್ ಸ್ಪೋಟ| ಕಾನೂನು ಕ್ರಮ ಕೈಗೊಳ್ಳಲು ಮಹಿಳಾ ಮುನ್ನಡೆ ಆಗ್ರಹ

ಹಾಸನದಲ್ಲಿ ಕೇಳಿಬರುತ್ತಿರುವ ಪೆನ್ ಡ್ರೈವ್ ಹಗರಣ, ಕರ್ನಾಟಕವೇ ಕಂಡು ಕೇಳಿರದ ಅತ್ಯಾಚಾರ ಮತ್ತು ಕಿರುಕುಳದ ಬಹುದೊಡ್ಡ ಹಗರಣವೆಂಬಂತೆ ರಾಜ್ಯದ ಜನತೆ ಚರ್ಚೆ ನಡೆಸುತ್ತಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿ ಎಷ್ಟೇ ಪ್ರಭಾವಿಯಾದರೂ, ಆತನ ವಿರುದ್ದ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಆಗ್ರಹಿಸಿದ್ದಾರೆ.

ಮಣಿಪುರದಲ್ಲಿ ಹೆಣ್ಣು ಮಕ್ಕಳನ್ನು ಬೆತ್ತಲುಗೊಳಿಸಿದಾಗ ಸದ್ದು ಮಾಡದವರು, ನಮ್ಮ ದೇಶದ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟಂತವರನ್ನು ಸಮರ್ಥಿಸಿ ಬೆಂಬಲಿಸಿ ತಮ್ಮ ಪಕ್ಷಗಳಿಗೆ ಸೇರಿಸಿಕೊಂಡಾಗ ಧ್ವನಿ ಎತ್ತಲಿಲ್ಲ ಮತ್ತು ಸ್ವಾತಂತ್ರ್ಯ ದಿನಾಚರಣೆಯ ದಿನವೆ ಒಬ್ಬ ಗರ್ಭಿಣಿ ಹೆಣ್ಣು ಮಗಳನ್ನು‌ ರಾಕ್ಷಸರಂತೆ ಸಾಮೂಹಿಕ ಅತ್ಯಾಚಾರ ನಡೆಸಿ ಜೀವಾವಧಿ ಶಿಕ್ಷೆಗೆ ಗುರಿ ಮಾಡಿದ್ದವರನ್ನು ಸನ್ನಡತೆಯ ಆದರದ ಮೇಲೆ ಬಿಡುಗಡೆಗೊಳಿಸಿದಾಗ ಪ್ರತಿಭಟಿಸದವರು ಇಂದು ರಾಜಕೀಯ ಹಿತಾಸಕ್ತಿಗಾಗಿ ರಾಜಕೀಯವಾಗಿ ಮೈತ್ರಿ ಮಾಡಿಕೊಂಡಿದ್ದು, ಇದರ ವಿರುದ್ದ ಧ್ವನಿಯೆತ್ತಬೇಕೆಂದು ಅವರು ಪ್ರಕರಣೆಯಲ್ಲಿ ಆಗ್ರಹಿಸಿದ್ದಾರೆ.

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಧ್ವನಿ ಎತ್ತದವರು, ಆಸೀಫ ಎಂಬ ಪುಟ್ಟ ಮಗುವನ್ನು ರಾಮನ ಹೆಸರಿನಲ್ಲಿ ಅತ್ಯಾಚಾರ ಮಾಡಿ ತ್ರಿಸೂಲದಿಂದ ಮರ್ಮಾಂಗಕ್ಕೆ ಚುಚ್ಚಿ ಕರಳನ್ನು ಹೊರ ತೆಗೆದವರು, ಹತ್ರಾಸ್ ನಲ್ಲಿ ಹೆತ್ತ ಮಗಳ ಶವವನ್ನು ಕೂಡಾ ಕುಟುಂಬದವರು ನೋಡಲು ಬಿಡದೇ ಸಾಕ್ಷಿ ನಾಶ ಮಾಡಲು ಊರಾಚೆ ಕೊಂಡೊಯ್ದು ಸುಟ್ಟು ಹಾಕಿದಾಗಲೂ ಬಾಯಿ ಬಿಚ್ಚದವರು. ಇತ್ತಿಚೀನ  ನೇಹಾ ಪ್ರಕರಣವನ್ನು ಇಟ್ಟು ಶವ ರಾಜಕಾರಣ ಮಾಡುತ್ತ ಹಿಂದು ಹೆಣ್ಣು ಮಗಳಿಗೆ ನ್ಯಾಯ ಕೊಡಿಸಿ ಅಂತಾ ಬೊಬ್ಬೆ ಹೊಡಯುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಆದ ರುಕ್ಸಾನ ಪ್ರಕರಣಕ್ಕೆ ಒಬ್ಬರು‌ ಕನಿಷ್ಠ ಸೌಜನ್ಯಕ್ಕದಾರೂ ಒಂದು ಹೇಳಿಕೆ ನೀಡಿಲ್ಲ ಅವರ ಹೋರಾಟದಲ್ಲಿ ಆ ಪ್ರಕರಣಕ್ಕೆ ‌ಸಂಬಂದಿಸಿದಂತೆ ಒಂದು ಧ್ವನಿಯೂ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಈಗ ಹಾಸನದಲ್ಲಿ ದೊಡ್ಡ ಲೈಂಗಿಕ ಹಗರಣ ಬೆಳಿಕಿಗೆ ಬಂದಿದೆ. ಇದರಲ್ಲಿ ಅದೆಷ್ಟೋ ಹಿಂದು ಹೆಣ್ಣು ಮಕ್ಕಳು ಅದರಲ್ಲೂ ಒಕ್ಕಲಿಗ ಹೆಣ್ಣು ಮಕ್ಕಳ ಮಾನವೂ ಹರಾಜಾಗಿರಬಹುದಲ್ಲವೇ ? ಕಿರುಕುಳಕ್ಕೆ ಅತ್ಯಾಚಾರಕ್ಕೆ ಒಳಗಾಗಿರಬಹುದಲ್ಲವೇ…? ಈಗ ಹಿಂದು ಹೆಣ್ಣು ಮಕ್ಕಳನ್ನು ರಕ್ಷಿಸಿ ಅಂತಾ ಬೊಬ್ಬೆ ಹೊಡೆಯುವ ಹಿಂದೂ ಪರ ಸಂಘಟನೆಗಳು ಹೋರಾಟಕ್ಕೆ ಕೂರಬೇಕು, ಇವರೆಲ್ಲ ಮಾನವಂತರಾಗಿದ್ದರೆ ಅಪರಾಧಿ ಯಾರು ಎಂಬುದನ್ನು ಬೆಳಕಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಕೋರ್ಟ್ ನಿಂದ ತನ್ನ ಲೈಂಗಿಕ ಹಗರಣದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಾರದು ಎಂದು ಸ್ಟೇ ತಂದಿರುವ ವ್ಯಕ್ತಿ ಯಾರೆಂಬುದನ್ನು ಬಯಲುಗೊಳಿಸಬೇಕು. ಈ ಪ್ರಕರಣದಲ್ಲಿ ಹೆಣ್ಣು ಮಕ್ಕಳ ಘನತೆಯನ್ನು ಕಾಪಾಡಲು ಹಿಂದು ಪರ ಮುಖಂಡರು, ಈ ಪ್ರಕರಣ ಬೆಳಕಿಗೆ ಬರುವ ತನಕ ಬೀದಿಯಲ್ಲಿ ಕೂತು ತಮ್ಮ ನಿಯತ್ತಿನ ಪ್ರದರ್ಶನ ಮಾಡಬೇಕೆಂದು ಅವರು ಒತ್ತಾಯಿಸಿದರು.

ಹೆಣ್ಣುಮಕ್ಕಳ ಘನತೆಗೆ ಚ್ಯುತಿ ಬರದಂತೆ ಎಚ್ಚರವಹಿಸಿ, ಇಂತಹ ಹೀನ ಕೃತ್ಯಕ್ಕೆ ಮಹಿಳೆಯರನ್ನು ಬಳಕೆ ಮಾಡಿಕೊಂಡು, ಅದನ್ನು ವಿಡಿಯೋ ಮಾಡಿಕೊಂಡಿರುವ ಕಾಮುಕ ಕ್ರಮಿಯ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು, ತಾಯಿ ವಯಸ್ಸಿನ ತನಗೆ ಅನ್ನವಿಕ್ಕುವ ಮಹಿಳೆಯನ್ನು ಬಲವಂತವಾಗಿ ತನ್ನ ಕಾಮತೃಷೆಗೆ ಬಳಸಿಕೊಳ್ಳುವ ವ್ಯಕ್ತಿ, ಭೂಮಿ ಮೇಲೆ ಬದುಕಲು ಅರ್ಹತೆಯನ್ನು ಕಳೆದುಕೊಂಡಿದ್ದಾನೆ. ಅಧಿಕಾರದ ಅಹಂ ನಿಂದ ಹೆಣ್ಣು ಮಕ್ಕಳನ್ನು ಟಿಸ್ಯೂ ಪೇಪರ್ ನಂತೆ ಬಳಸಿ ವಿಡಿಯೋ ಮಾಡಿಕೊಂಡಿರುವ ಕಿರಾತಕನಿಗೆ ಕಠಿಣ ಶಿಕ್ಷೆ ಆಗಲೇಬೇಕು. ಆದ್ದರಿಂದ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!