Monday, April 29, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಾಳೆಯಿಂದ ಉಂಡೆ ಕೊಬ್ಬರಿ ಖರೀದಿಗೆ ನೋಂದಣೆ ಪ್ರಾರಂಭ

2024 ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ರೈತರಿಂದ ನೇರವಾಗಿ ಖರೀದಿಸಲು ಮಂಡ್ಯ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ.

ರೈತರ ನೋಂದಣಿಯನ್ನು NIC ತಂತ್ರಾಂಶದಲ್ಲಿ FRUITS ID ಮೂಲಕ ನಿರ್ವಹಿಸಲಾಗುವುದು. ರೈತರ ನೋಂದಣಿ ಪ್ರಕ್ರಿಯೆಯು ಮಾರ್ಚ್ 04 ರಿಂದ ಬೆಳಗ್ಗೆ 8.00 ಗಂಟೆಗೆ ಪ್ರಾರಂಭವಾಗುತ್ತದೆ. ಪ್ರತಿ ದಿನ ಸಮಯ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೂ ನೋಂದಣಿ ಮಾಡಿಕೊಳ್ಳಬಹುದು.

ರೈತರು ತಮ್ಮ FRUITS ID ಸಂಖ್ಯೆ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ನೋಂದಣಿ ಕೇಂದ್ರಕ್ಕೆ ತರುವುದು. ರೈತರ ನೋಂದಣಿಯನ್ನು Adhaar Based Biometric Authentication ಮೂಲಕ ಕೈಗೊಳ್ಳಲಾಗುವುದು. ರೈತ ಬಾಂಧವರು ಖರೀದಿ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ಸಾವಧಾನವಾಗಿ ನಿಂತು ನೋಂದಣಿ ಮಾಡಿಸುವುದು.

ನೋಂದಣಿಗೆ ಸಂಬಂಧಿಸಿದಂತೆ ಮಂಡಳಿಯಿಂದ ಯಾವುದೇ ಟೋಕನ್ ರೈತರಿಗೆ ವಿತರಿಸಲಾಗುವುದಿಲ್ಲ. ಸರ್ಕಾರದ ಯೋಜನೆಯು ನೈಜ ರೈತರಿಗೆ ದೊರಕಿಸಿಕೊಡುವ ಸದುದ್ದೇಶದಿಂದ ರೈತರ FID ಯಲ್ಲಿನ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ತಾಳೆ,ಹೋಂದಣಿಕೆಯಾಗದಿದ್ದಲ್ಲಿ ಅಂತಹ ರೈತರು ತೆಂಗು ಬೆಳೆ ಬೆಳೆದಿರುವ ಬಗ್ಗೆ/ಉಂಡೆ ಕೊಬ್ಬರಿ ಇರುವ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್‌ರವರಿಂದ ದೃಡೀಕರಣ ಪಡೆದು ಖರೀದಿ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಿದ್ದಲ್ಲಿ ಮಾತ್ರ ನೋಂದಣಿ ಮಾಡಲಾಗುವುದು.

ಖರೀದಿ ಕಾರ್ಯ
ನೋಂದಣಿಯಾದ ರೈತರಿಂದ ಮಾತ್ರ ಎಫ್.ಎ.ಕ್ಕೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಪ್ರತಿ ಕ್ವಿಂಟಾಲ್‌ ಬೆಂಬಲ ಬೆಲೆ ದರ ರೂ.12000/- ರಂತೆ ಖರೀದಿಸಲಾಗುವುದು. ಪ್ರತಿ ಎಕರೆಗೆ 06 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಮಾತ್ರ ಖರೀದಿಸಲಾಗುವುದು.

ನೋಂದಣಿಯಾದ ರೈತರಿಗೆ ಯಾವ ದಿನಾಂಕದಂದು ಉಂಡೆ ಕೊಬ್ಬರಿಯನ್ನು ಖರೀದಿ ಕೇಂದ್ರಗಳಿಗೆ ತರಬೇಕು ಎಂದು ಖರೀದಿ ಅಧಿಕಾರಿಗಳು ರೈತರಿಗೆ ತಿಳಿಸುತ್ತಾರೆ. ಅದೇ ದಿನಾಂಕದಂದು ರೈತರು ತಮ್ಮ ದಾಸ್ತಾನನ್ನು ಖರೀದಿ ಕೇಂದ್ರಕ್ಕೆ ತರುವುದು.

ಎಫ್.ಎ.ಕ್ಯೂ. ಗುಣಮಟ್ಟದ ಉಂಡೆ ಕೊಬ್ಬರಿಯನ್ನು ರೈತರಿಂದ ಮಾತ್ರ ಮಂಡಳಿಯು ಖರೀದಿಸುತ್ತದೆ. ಕಳಪೆ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲಾಗುವುದಿಲ್ಲ, ಕಳಪೆ ಗುಣಮಟ್ಟದ ಕಾರಣ ದಾಸ್ತಾನು ತಿರಸ್ಕೃತಗೊಂಡಲ್ಲಿ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ದಾಸ್ತಾನನ್ನು ವಾಪಸ್ಸು ತೆಗೆದುಕೊಂಡು ಹೋಗುವುದು.

ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವನ್ನು DBT ಮೂಲಕ ಪಾವತಿಸಲಾಗುವುದು. ಎಲ್ಲಾ ರೈತ ಬಾಂಧವರು ಸರ್ಕಾರದ ಈ ಯೋಜನೆಯನ್ನು  ಸದು ಪಯೋಗಪಡಿಸಿಕೊಳ್ಳಬೇಕೆಂದು ಮಂಡ್ಯ, ಪಾಂಡವಪುರ ಮತ್ತು ಮದ್ದೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದ ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!