Friday, June 21, 2024

ಪ್ರಾಯೋಗಿಕ ಆವೃತ್ತಿ

ನಮ್ಮ‌ ಮನೆಗೆ ನಾವೇ ಯಜಮಾನರಾಗಬೇಕು; ಚಲುವರಾಯಸ್ವಾಮಿ

ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವ ಸ್ಟಾರ್ ಚಂದ್ರು, ಸ್ಥಳೀಯವಾಗಿ ಜನರ ಕೈಗೆ ಸಿಗುತ್ತಾರೆ. ನಮ್ಮ‌ ಮನೆಗೆ ನಾವೇ ಯಜಮಾನರಾಗಬೇಕು. ನಮ್ಮ (ನಾಗಮಂಗಲ) ತಾಲೂಕಿನವರನ್ನು ಸಂಸದರನ್ನಾಗಿ ಮಾಡೋ ಅವಕಾಶ ಸಿಕ್ಕಿದೆ, ಆದ್ದರಿಂದ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ನಾಗಮಂಗಲ ತಾಲೂಕಿನ ನಾನಾ ಗ್ರಾಮ ಪಂಚಾಯತಿಗಳಲ್ಲಿ ಮತಪ್ರಚಾರ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಶಾಸಕರಾಗಿದ್ದಾರೆ, ಅವರು ಅಲ್ಲಿ ಕೆಲಸ ಮಾಡಲಿ. ಪದೇ ಪದೇ ಕ್ಷೇತ್ರ ಬದಲಾಯಿಸೋದು ಸರಿಯಲ್ಲ. ಸ್ಥಳೀಯವಾಗಿ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಬದಿಗೊತ್ತಿ ಸ್ಟಾರ್ ಚಂದ್ರು ಗೆಲುವಿಗೆ ಸಹಕರಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಸ್ಟಾರ್ ಚಂದ್ರು ಮಾತನಾಡಿ, ನಾಗಮಂಗಲ ತಾಲೂಕಿನ ಜನತೆ ಅತಿ ಹೆಚ್ಚು ಲೀಡ್ ನಲ್ಲಿ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!