Saturday, May 18, 2024

ಪ್ರಾಯೋಗಿಕ ಆವೃತ್ತಿ

ವಿಜೃಂಭಣೆಯಿಂದ ನಡೆದ ಶ್ರೀ ಮತ್ತಿತಾಳೇಶ್ವರಸ್ವಾಮಿ ಪೂಜಾ ಮಹೋತ್ಸವ

ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿ, ಕಂದೇಗಾಲ, ಮೋಳೇದೊಡ್ಡಿ ಗ್ರಾಮಗಳ ಮಧ್ಯೆ ನೆಲೆಸಿರುವ ಶ್ರೀ ಮತ್ತಿತಾಳೇಶ್ವರ ಸ್ವಾಮಿಯ ಪೂಜಾ ಮಹೋತ್ಸವವು ನಾಗರ ಪಂಚಮಿ ಅಂಗವಾಗಿ ಭಕ್ತಿ ಪ್ರಧಾನವಾಗಿ ವಿಜೃಂಭಣೆಯಿಂದ ನಡೆಯಿತು.

ನಾಗಪಂಚಮಿ ಅಂಗವಾಗಿ ಮತ್ತಿತಾಳೇಶ್ವರ ದೇವರಿಗೆ ವಿವಿಧ ಹೂಗಳಿಂದ ಆಲಂಕರಿಸಿ ಮುಂಜಾನೆ ಸ್ವಾಮಿಗೆ ಹೋಮ, ಹವನ ದೊಂದಿಗೆ ಹಲವು ರೀತಿಯ ಅಭಿಷೇಕ ನಡೆಸಲಾಯಿತು.

ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಬಸವಪ್ಪ, ಮತ್ತಿತಾಳೇಶ್ವರ ಬಸವಪ್ಪ, ಮತ್ತಿತಾಳೇಶ್ವರ ಉತ್ಸವ ಮೂರ್ತಿಗೆ ಹೂವು ಹೊಂಬಾಳೆ ನಡೆಸಿ ಪೂಜೆ ಸಲ್ಲಿಸಲಾಯಿತು.

ಮಳವಳ್ಳಿ, ಮದ್ದೂರು, ನಾಗಮಗಲ, ಚನ್ನಪಟ್ಟಣ,ಕನಕಪುರ ಸೇರಿದಂತೆ ವಿವಿಧ ತಾಲ್ಲೂಕಿನಿಂದ ಸಾವಿರಾರು ಆಗಮಿಸಿದ ಸಾವಿರಾರು ಭಕ್ತರು ಮತ್ತಿತಾಳೇಶ್ವರ, ಮಹದೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಹುತ್ತಕ್ಕೆ ಹಾಲು ಹಾಕುವುದರ ಮೂಲಕ ಧನ್ಯತೆ ಮರೆದರು.

ಮತ್ತಿತಾಳೇಶ್ವರ ಆರ್ಚಕರು ಮಾತನಾಡಿ, ಸುಮಾರು 800 ವರ್ಷಗಳ ಹಿಂದೆ ಸುಬ್ರಮಣ್ಯ ಸ್ವಾಮಿಯು ಲಿಂಗದ ರೂಪದಲ್ಲಿ ಉದ್ಬವಿಸಿದರು. ಮತ್ತಿಮರದ ಕೆಳೆಗೆ ನೆಲೆಸಿದ ಸ್ವಾಮಿಗೆ ಮತ್ತಿತಾಳೇಶ್ವರ ಎಂದು ಕರೆಯಲಾಯಿತು. ಯಾವುದೇ ಚರ್ಮದ ಕಾಯಿಲೆ ಇದ್ದರೂ ಇಲ್ಲಿಗೆ ಬಂದು ದೇವರಿಗೆ ಪೂಜೆ ಸಲ್ಲಿಸಿ ಇಲ್ಲಿನ ಹುತ್ತದ ಮಣ್ಣು ಮತ್ತು ಮತ್ತಿಮರದಪುಡಿಯನ್ನು ಲೇಪನ ಮಾಡಿದರೇ ಚರ್ಮದ ಕಾಯಿಲೆ ವಾಸಿಯಾಗುತ್ತದೆ.

ನಾಗರಹಾವಿನ ರೂಪದಲ್ಲಿ ದೇವರು ಇಲ್ಲಿರುವುರಿಂದ ಕಳೆದ 30 ವರ್ಷಗಳಿಂದಲೂ ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ, ನಾಗಪಂಚಮಿಯ ಅಂಗವಾಗಿ ದೇವರಿಗೆ ವಿವಿಧ ರೀತಿಯ ಹೋಮ,ಹವನ ಮಹಾಮಂಗಳಾರತಿ ನಡೆಸಿ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ನಾಗರಪಂಚಮಿಯ ದಿನವಾದ ಇಂದು ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.ಮದುವೆ, ಮಕ್ಕಳ ಭಾಗ್ಯವನ್ನು ಸ್ವಾಮಿ ಕರುಣಿಸುತ್ತಾರೆಂದು ತಿಳಿಸಿದರು.

ಶ್ರೀ ಮತ್ತಿತಾಳೇಶ್ವರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಅಂತಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪೂರಿಗಾಲಿ ಮಹದೇವಸ್ವಾಮಿ ಅವರಿಂದ ಜಾನಪದ ಗೀತಗಾಯನ ನಡೆಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!