ಈ ಮೇಲಿನ ಆಮಂತ್ರಣ ಪತ್ರವನ್ನು ಓದುತ್ತಿದ್ದಂತೆ ಮುಖಮಂಡಲದಲ್ಲಿ ಒಂದು ನಗು, ಮನಸ್ಸಿಗಾಗುವು ಆನಂದವೇ ಬೇರೆ ಬುಡಿ. ಬಹುಶ ಭಾಷೆಗೆ ಇರುವ ಶಕ್ತಿಯೇ ಇರಬೇಕು, ಬಹುಬೇಗನೇ ತನ್ನ ಹುಟ್ಟಿನ, ನೆಲದ ಸಂಸ್ಕೃತಿಯನ್ನು, ತನ್ನ ಮೂಲ ಭಾಷೆಯನ್ನು ಬಹು ಬೇಗ ವಿವೇಕಕ್ಕೆ ರವಾನಿಸಿಬಿಡುತ್ತದೆ.
ಇಂದಿನ ಯುಗದಲ್ಲಿ ಹಲವು ಭಾಷೆಯನ್ನು ಕಲಿಯಲು ಅವಕಾಶಗಳಿದೆ.ಆ ಭಾಷೆಗಳೆಲ್ಲಾ ಮಾತನಾಡಲೂ ಬಂದರೂ ಸಹ, ನಮ್ಮ ಭಾಷೆ ಎಂದಾಗ, ಏನೋ ಮನಸ್ಸಿನಲ್ಲಿ ಆನಂದವೊ ಆನಂದ. ಈ ಭಾಷೆಗೆ ಅಂತಾ ಶಕ್ತಿ ಇದೆ. ಏಕೆಂದರೆ ಅದು ಭಾಷೆ ಮತ್ತು ಬದುಕಿನ ಭಾಗವಾಗಿದ್ದರಿಂದ.


ಮಂಡ್ಯದ ಸರ್ಕಾರಿ ಮಾಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಎಂ.ವೈ.ಶಿವರಾಮುರವರು ಮನೆಯ ಗೃಹಪ್ರವೇಶಕ್ಕೆ ವಿಭಿನ್ನವಾಗಿ ಮಾಡಿಸಿರುವ ಆಹ್ವಾನ ಪತ್ರಿಕೆಯು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು , ಈ ಆಹ್ವಾನ ಪತ್ರವನ್ನು ತನ್ನ ಸ್ನೇಹಿತರಿಗೆ ಕಳಿಸಿದಾಗ, ಅದು ವಿಶಿಷ್ಟ ಮತ್ತು ಹಳ್ಳಿಯ ಸೊಗಡಿನೊಂದಿಗೆ ಮೂಡಿದೆ ಎನ್ನುವಂತೆ ಕಂಡು, ಜನರೊಂದಿಗೇ ಸಾಗೀ ಮುನ್ನಲೆಗೆ ಬಂದು ಸುದ್ದಿಯಾಗಿದೆ ಎನ್ನುತ್ತಾರೆ ಡಾ.ಶಿವರಾಮುರವರು.
ತುಂಬಾ ಇಷ್ಟ ಪಟ್ಟು ಕಟ್ಟಿದ ಮನೆಗೆ, ಸಂಬಂಧಿಕರು ಮತ್ತು ಸ್ನೇಹಿತ ವರ್ಗದವರನ್ನು ವಿಭಿನ್ನವಾಗಿ ಕರೆಯಬೇಕು ಅನ್ನಿಸಿತು, ಹಾಗೇ ಅವರು ಸೈಟಿನ ಬಗ್ಗೆ ಅದರ ಅಳತೆಯ ಬಗ್ಗೆ ಮನೆಯ ಬಗ್ಗೆ ವಿಚಾರಿಸುವ ಬಗೆಯನ್ನೇ ಯೋಚಿಸಿದಾಗ ಈ ಯೋಚನೆ ಬಂದಿತು, ಹೀಗೆ ಯೋಚಿಸುವುದಕ್ಕೆ ಕಾರಣ ನನ್ನ ಹಾಡು ಭಾಷೆ, ಹಳ್ಳಿಭಾಷೆ ಕನ್ನಡ. ಈಗ ಯಾವುದೇ ಕುಟುಂಬವನ್ನು ಕಾರ್ಯಕ್ರಮಕ್ಕೆಮಗಳಿಗೆ ಕರೆಯಲು ಒಂದೇ ತರಹ, ಒಂದೇ ಫಾರ್ಮೆಟ್ ರೀತಿಯಲ್ಲಿ ವಿನಂತಿಸುವುದು ಹೊಸದೇನಲ್ಲ. ಅದು ನನಗೆ ನಮ್ಮ ಹಳೆಯತನ ಅಂತ ನನಗೆ ಅನ್ನಿಸಲಿಲ್ಲ. ಆದ್ದರಿಂಧ ನನಗೆ ಈ ಯೋಚನೆ ಬಂದಿರಬಹುದು ಎಂದು ಹೇಳಿದರು.
ಸದ್ಯಕ್ಕೆ ಈ ಆಹ್ವಾನ ಪತ್ರಿಕೆಯನ್ನು ನೋಡಿ ಹಿರಿಯ ಸಿನಿಮಾ ನಟರಾದ ದೊಡ್ಡಣ್ಣನವರು, ನನ್ನ ಸ್ನೇಹಿತರು, ನನಗೆ ಪರಿಚಯವೇ ಇಲ್ಲದ ಅನೇಕ ಬಂದುಗಳು, ವಿದೇಶಿ ಕನ್ನಡಿಗರು, ಗಣ್ಯರು ಎಲ್ಲರೂ ಮಾತಾಡಿಸುತ್ತಿದ್ದಾರೆ. ಇದರಿಂದ ನನಗೆ ನನ್ನ ಕುಟುಂಬಕ್ಕೆ ತುಂಬಾ ಕುಷಿ ತಂದಿದೆ. ಇದರಿಂದ ನನಗೆ ಅನ್ನಿಸೋದು ನಮ್ಮ ನೆಲದ ಭಾಷೆಗೆ, ನಮ್ಮ ಹಳ್ಳಿಯಸೊಗಡಿಗೆ ಇರುವ ಘನತೆ ಎಷ್ಟು ದೊಡ್ಡದು ಎಂದು ಗೊತ್ತಾಗುತ್ತದೆ ಎನ್ನುತ್ತಾರೆ.
ಅಂದಹಾಗೆ ಇವರ ಗೃಹ ಪ್ರವೇಶದ ಆಹ್ವಾನ ಪತ್ರವನ್ನು ನೀವು ಓದಿ ಖುಷಿಪಡಿ.