Friday, April 19, 2024

ಪ್ರಾಯೋಗಿಕ ಆವೃತ್ತಿ

ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷರ ಆಯ್ಕೆ

ಮಂಡ್ಯ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಅಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಬಸರಾಳು ಯೋಗೇಶ್ ಇಂದು ಸರ್ವಾನುಮತದಿಂದ ಆಯ್ಕೆಯಾದರು.

ಮಂಡ್ಯದ ವಿದ್ಯಾ ನಗರದಲ್ಲಿರುವ ಪಿ ಎಲ್ ಡಿ ಬ್ಯಾಂಕಿನಲ್ಲಿ ಇಂದು ನಡೆದ ಸಭೆಯಲ್ಲಿ ಯೋಗೇಶ್ ಅವರನ್ನು ಪಕ್ಷಾತೀತವಾಗಿ ಸದಸ್ಯರು ಆಯ್ಕೆ ಮಾಡಿದರು. ನೂತನ ಉಪಾಧ್ಯಕ್ಷ ಯೋಗೇಶ್ ಅವರಿಗೆ ಬ್ಯಾಂಕಿನ ಸಿಬ್ಬಂದಿ ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದರು.

ನೂತನ ಉಪಾಧ್ಯಕ್ಷ ಯೋಗೇಶ್ ಮಾತನಾಡಿ, ಶಾಸಕ ಎಂ.ಶ್ರೀನಿವಾಸ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್ ಹಾಗೂ ಸದಸ್ಯರೆಲ್ಲರ ಸಹಕಾರದಿಂದ ಆಯ್ಕೆಯಾಗಿದ್ದೇನೆ.ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ರೈತರ ಜೀವನಾಡಿಯಾಗಿರುವ ಪಿ ಎಲ್ ಡಿ ಬ್ಯಾಂಕ್ ಅನ್ನು ಅಭಿವೃದ್ಧಿ ಮಾಡುವುದು ನನ್ನ ಉದ್ದೇಶ ಎಂದರು. ನನ್ನ ಆಯ್ಕೆಗೆ ಶಿವಲಿಂಗಯ್ಯ,ಬೆಟ್ಟಪ್ಪ ದೇವರಾಜ್, ಬೋರೇಗೌಡ ರವೀಂದ್ರ,ಸುನಂದಕ್ಕ, ಬಸರಾಳು ರಾಮೇಗೌಡ ಇವರು ಕಾರಣರಾಗಿದ್ದು,ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಬ್ಯಾಂಕಿನ ಅಧ್ಯಕ್ಷ ಬೇಲೂರು ಸೋಮಶೇಖರ್, ಪಕ್ಷಾತೀತವಾಗಿ ಯೋಗೇಶ್ ಅವರ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಶಾಸಕ ಎಂ. ಶ್ರೀನಿವಾಸ್ ಅವರು ಬ್ಯಾಂಕಿನ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.ಅವರ ಅನುದಾನವನ್ನು ಬಳಸಿ ರೈತರಿಗೆ ನೆರವು ನೀಡುವುದಾಗಿ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!