Saturday, May 18, 2024

ಪ್ರಾಯೋಗಿಕ ಆವೃತ್ತಿ

ಡಿ.31ರೊಳಗೆ ಯಶಸ್ವಿನಿ ಯೋಜನೆಗೆ ನೋಂದಾಯಿಸಿ : ವಿಕ್ರಮರಾಜೇ ಅರಸ್

2022-23 ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಹಕಾರ ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಸಾರ್ವಜನಿಕರು ಇದೇ 31ರೊಳಗೆ ಈ ಯೋಜನೆಗೆ ನೋಂದಾಯಿಸಿಕೊಳ್ಳುವಂತೆ ಸಹಕಾರಿ ಸಂಘಗಳ ಉಪ ನಿಬಂಧಕ ವಿಕ್ರಮ್ ರಾಜೇ ಅರಸ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿಯಲ್ಲಿ ಸದಸ್ಯರಾಗಲು ಎಲ್ಲಾ ವಿಧದ ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳು, ಸೌಹಾರ್ದ ಸಹಕಾರಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನನಲ್ಲಿ ವ್ಯವಹರಿಸುತ್ತಿರುವ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರು ಈ ಯೋಜನೆಗೆ ಅರ್ಹರಾಗಿದ್ದಾರೆ ಎಂದರು.

ನೋಂದಾಯಿಸಿಕೊಳ್ಳಲು ಸದಸ್ಯತ್ವ ಪಡೆದು 3 ತಿಂಗಳಾಗಿರಬೇಕು. ಗ್ರಾಮೀಣ ಸಹಕಾರ ಸಂಘದ ಸದಸ್ಯರಿಗೆ (ಒಟ್ಟು ನಾಲ್ಕು ಜನರಿಗೆ) ರೂ.500, ನಗರ ಸಹಕಾರ ಸಂಘದ ರೂ.1000, ಹೆಚ್ಚುವರಿ ಸದಸ್ಯರೊಬ್ಬರಿಗೆ ಗ್ರಾಮೀಣ-ರೂ.100 ಮತ್ತು ನಗರ ರೂ.200,  ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಗಿರಿಜನರಿಗೆ ನೋಂದಣಿ ಶುಲ್ಕ ಉಚಿತವಾಗಿದೆ ಎಂದು ವಿವರಿಸಿದರು. ಜ.1,2023ರಿಂದ ಯೋಜನೆಯು ಅನುಷ್ಠಾನಕ್ಕೆ ಬರಲಿದ್ದು, ಇದರ ಅವಧಿ ಒಂದು ವರ್ಷವಾಗಿದ್ದು, 01-01-2023 ರಿಂದ 31-12-2023ರವರೆಗೆ ಚಾಲ್ತಿಯಲ್ಲಿರಲಿದೆ ಎಂದರು.

ಪ್ರತಿ ಕುಟುಂಬ ಸದಸ್ಯರಿಗೂ ಒಂದು ಯೂನಿಕ್ ಕಾರ್ಡ್ ಲಭ್ಯವಿದ್ದು, ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ಗಳ ವರೆಗೆ ಶಸ್ತ್ರಚಿಕಿತ್ಸಾ ವೆಚ್ಚ, ಸುಮಾರು 1650 ರೋಗಗಳಿಗೆ ಚಿಕಿತ್ಸಾ ಸೌಲಭ್ಯ, ಮಂಡ್ಯ ಜಿಲ್ಲೆಯಲ್ಲಿ ಒಟ್ಟು 23 ನೆರ್ಟ್‌ವರ್ಕ್ ಆಸ್ಪತ್ರೆಗಳು ಇರುತ್ತವೆ. ಪ್ಯಾಕೇಜ್ ರೀತಿಯಲ್ಲಿ ನಗದು ರಹಿತ ಸೌಲಭ್ಯವಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಮಂಡ್ಯ ಜಿಲ್ಲಾ ಯಶಸ್ವಿನಿ ಕೋ ಆರ್ಡಿನೇಟರ್ ನಂಜುಂಡಸ್ವಾಮಿ ಅವರನ್ನು ಸಂಪರ್ಕಿಸಬಹುದು. ಮಂಡ್ಯ ಜಿಲ್ಲೆಯಲ್ಲಿ ಒಟ್ಟಾರೆ 1.50 ಲಕ್ಷ ಜನರನ್ನು ನೋಂದಾಯಿಸಲು ಗುರಿ ನಿಗದಿಪಡಿಸಿದ್ದು, ಪ್ರಸ್ತುತ 52,000 ಗಳ ಸದಸ್ಯರನ್ನು ನೋಂದಾಯಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಹಕಾರ ಇಲಾಖೆಯ ನಾಗಭೂಷಣ್, ಎಂ.ಕೆ.ಸುಂದ್ರಪ್ಪ, ಪುಟ್ಟಸ್ವಾಮಿ, ಪ್ರಮೋದ್ ಮತ್ತು ಮುಕ್ತ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!