Tuesday, April 30, 2024

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ಸೋಲಿಸಿದ್ದು ಪುರೋಹಿತಶಾಹಿಗಳೇ ಹೊರತು, ಕಾಂಗ್ರೆಸಿಗರಲ್ಲ: ಶಾಸಕ ನರೇಂದ್ರಸ್ವಾಮಿ

ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಎಲ್ಲ ಹೋರಾಟಗಾರರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೆಸರಿನಲ್ಲೇ ಚಳವಳಿ ಮಾಡಿದ್ದರು. ಸ್ವಾತಂತ್ರ‍್ಯಾ ನಂತರದ ಕಾಲಘಟ್ಟದಲ್ಲಿ ಎದುರಾದ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಹಿ ವರ್ಗದವರು ಸೋಲಿಸಿದರೆ ಹೊರತು ಮೂಲ ಕಾಂಗ್ರೆಸಿಗರಲ್ಲ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಸ್ಪಷ್ಟಪಡಿಸಿದರು.

ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸಿಗರು ಸೋಲಿಸಿದರೂ ಎಂಬುದು ಸಂಘ ಪರಿವಾರದ ಪುರೋಹಿತಶಾಹಿಗಳ ಕಟ್ಟುಕಥೆಯಾಗಿದೆ, ಅವರನ್ನು ಸೋಲಿಸಿದ್ದು ಮನುವಾದಿ ಮನಸ್ಥಿತಿಯಿದ್ದ  ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಹಿ ವರ್ಗವೇ ಹೊರತು, ಮೂಲ ಕಾಂಗ್ರೆಸ್ಸಿಗರಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಈ ರಾಷ್ಟ್ರಕ್ಕೆ ಕಾಂಗ್ರೆಸ್ಸಿನ ಕೊಡುಗೆ ಬಹಳ ಇದೆ. ಜೊತೆಗೆ ಅಂಬೇಡ್ಕರ್ ಅವರ ಕೊಡುಗೆಯೂ ಇದೆ. ಇಂತಹ ಅಂಬೇಡ್ಕರ್ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರನ್ನು ಕಾಂಗ್ರೆಸ್ಸಿಗರೇ ಸೋಲಿಸಿದರು ಎಂದು ಪದೇ ಪದೇ ಬಿಜೆಪಿಯವರು ಹೇಳುತ್ತಲೇ ಇದ್ದಾರೆ. ಅದರ ಮೂಲ ಹುಡುಕಿದಾಗ ತಿಳಿದಿದ್ದು, ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಹಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್ ಪಕ್ಷ ಎಂದಿಗೂ ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಹಾಳುವ ಕೆಲಸ ಮಾಡಲಿಲ್ಲ. ಬದಲಾಗಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಅಭಿವೃದ್ಧಿ ಕಾರ‍್ಯಗಳನ್ನು ಮಾಡಿದೆ. ಪ್ರಧಾನಿಯಾಗಿದ್ದ ದಿಟ್ಟ ಮಹಿಳೆ ಇಂದಿರಾಗಾಂಧಿಯವರ ಆಡಳಿತವನ್ನು ಸಹಿಸದೆ ಸಿಖ್ ಆಪರೇಷನ್ ಬ್ಲೂಸ್ಟಾರ್ ಹತ್ಯೆ ಮಾಡಿದರು. ನಂತರ ಅನಿವಾರ‍್ಯವಾಗಿ ರಾಜೀವ್‌ಗಾಂಧಿಯವರು ಆಡಳಿತ ಹಿಡಿದು ತಂತ್ರಜ್ಞಾನ ಕ್ರಾಂತಿಯನ್ನೇ ಮಾಡಿದರು. ಇಂದು ದೇಶದ ಎಲ್ಲ ನಾಗರೀಕರೂ ಕೈಯಲ್ಲೇ ಜಗತ್ತನ್ನು ನೋಡುವ ಸ್ಥಿತಿಗೆ ಅಂದಿನ ರಾಜೀವ್‌ಗಾಂಧಿಯವರ ಯೋಜನೆಯೇ ಕಾರಣ ಎಂದು ತಿಳಿಸಿದರು.

ಇಂತಹ ಕ್ರಾಂತಿಕಾರಿ ಆಡಳಿತಗಾರ ರಾಜೀವ್‌ಗಾಂಧಿಯನ್ನು ತನ್ನ ತಾಯಿಯ ಹತ್ಯೆಯ 7 ವರ್ಷಗಳ ಅಂತರದಲ್ಲಿ ಈ ದೇಶದ ಎಲ್‌ಟಿಟಿ ಉಗ್ರರು ಕೊಂದುಹಾಕಿದರು. ಬಳಿಕ ರಾಹುಲ್, ಸೋನಿಯಾ ಕುಟುಂಬ ಸುಧೀರ್ಘ ಕಾಲ ಅಜ್ಞಾತವಾಸ ಅನುಭವಿಸಬೇಕಾಯಿತು. ನಂತರ ಜಗತ್ತೇ ಮೆಚ್ಚುವ ಆರ್ಥಿಕ ತಜ್ಞ ಡಾ. ಮನ್‌ಮೋಹನ್‌ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿ 10 ವರ್ಷ ಈ ದೇಶದ ಆಡಳಿತ ನಡೆಸಿ ಎಲ್ಲ ವರ್ಗದ ಜನರಿಗೂ ಯೋಜನೆ ರೂಪಿಸಿದರು ಎಂದು ಹೇಳಿದರು.

ಏಕೆ ಕ್ರಮಕ್ಕೆ ಮುಂದಾಗಲಿಲ್ಲ

ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಹೆಣ್ಣು ಮಕ್ಕಳನ್ನು ಅಪಹರಿಸಿ ಬಲವಂತವಾಗಿ ಆಸ್ತಿ ಬರೆಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ ಅವರೇ ಮುಖ್ಯಮಂತ್ರಿಯಾಗಿದ್ದವರು ಒಂದು ವೇಳೆ ಶಿವಕುಮಾರ್ ಅವರು ಹೆಣ್ಣು ಮಕ್ಕಳನ್ನು ಅಪಹರಿಸಿದ್ದರೆ ಏಕೆ ಕಾನೂನು ಕ್ರಮಕ್ಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಕಾನೂನು ಕ್ರಮ ಕೈಗೊಳ್ಳದೆ ಇಡೀ ಮಹಿಳಾ ವರ್ಗಕ್ಕೆ ಅಪಮಾನ ಮಾಡಿದ್ದೀರಿ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ‍್ಯದರ್ಶಿ ಎಲ್.ಪದ್ಮನಾಭ, ಜಿಲ್ಲಾ ವಕ್ತಾರ ಟಿ.ಎಸ್. ಸತ್ಯಾನಂದ ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!