Monday, May 6, 2024

ಪ್ರಾಯೋಗಿಕ ಆವೃತ್ತಿ

ಹೆಣ್ಣುಮಕ್ಕಳ ಬಗ್ಗೆ ಹೆಮ್ಮೆಯ ಭಾವನೆ ಇರಲಿ: ಡಾ. ಪ್ರಫುಲ್ಲ

ಹೆಣ್ಣೆಂದರೆ ಕೀಳಾಗಿ ಕಾಣಬೇಡಿ ಹೆಣ್ಣನ್ನು ಬೆಳೆಸಿ, ಓದಿಸಿ ಪ್ರೋತ್ಸಾಹಿಸಿರೆಂದು ಆಡಳಿತ ವೈದ್ಯಾಧಿಕಾರಿ ಡಾ. ಎ ಎಸ್ ಪ್ರಫುಲ್ಲ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಆರ್ ಸಾಗರ್ ದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಏರ್ಪಡಿಸಿದ “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ”ಅಂಗವಾಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಗೆ ಹಣ್ಣು ಹಂಪಲ ವಿತರಿಸಿ ಮಾತನಾಡಿದರು.

ಹೆಣ್ಣು ಎಂದರೆ ಬೇರೆ ಮನೆಯ ವಸ್ತು ಎಂಬ ಭಾವನೆಯಿಂದ ಹೊರಬಂದು ಅವರ ಬಗ್ಗೆ ಹೆಮ್ಮೆಯ ಭಾವವಿರಲಿ. ಇತ್ತಿಚಗೆ ಹೆಣ್ಣಿನ ಸಂಖ್ಯೆ ಕಡಿಮೆ ಆಗುತ್ತಿದ್ದು ಇದರಿಂದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ ಹೆಣ್ಣು ಭ್ರೂಣ ಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕಬಾರದು ಅದು ಕಾನೂನು ರೀತ್ಯಾ ಅಪರಾಧವಾಗಿದೆ. ಕಾರಣ ಸ್ತ್ರೀ ಪುರುಷರ ಅನುಪಾತ ಸಮನಾಗಿರುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ .ಡಿ. ಬೆನ್ನೂರ ಮಾತನಾಡಿ ಹುಟ್ಟಿದ ಹೆಣ್ಣು ಮಗು ಎಂದಿಗೂ ಭಾರವಲ್ಲ ಅದೇ ಹೆಣ್ಣು ಮಗುವನ್ನು ಗಂಡು ಮಗ ನಂತೆ ಬೆಂಬಲಿಸಿ ಎಂದರು.

ಕಾರ್ಯಕ್ರಮದಲ್ಲಿ ಆಯುಷ್ ವೈದ್ಯ ಡಾ. ಸುದೀಪ ಕುಮಾರ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ, ಶುಶ್ರೂಷಣಾಧಿಕಾರಿ ದ್ರಾಕ್ಷಾಯಣಿ ಹಾಗೂ ಸಲ್ಮಾ, ಆಶಾ ಕಾರ್ಯಕರ್ತೆ ಪುಷ್ಪ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!